Need help? Talk to our expert.
WhatsApp


ನಾರ್ಮಲ್ ಹಾರ್ಟ್ ರೇಟ್ ಎಷ್ಟಿರಬೇಕು, ನಾಡಿಮಿಡಿತ ತಿಳಿಯವುದು ಹೇಗೆ, ಅಪಾಯಕಾರಿ ರೇಂಜ್ ಎಷ್ಟು!

Metropolis Healthcare
Last Updated February 13, 2026
Kannada
ನಾರ್ಮಲ್ ಹಾರ್ಟ್ ರೇಟ್ ಎಷ್ಟಿರಬೇಕು, ನಾಡಿಮಿಡಿತ ತಿಳಿಯವುದು ಹೇಗೆ, ಅಪಾಯಕಾರಿ ರೇಂಜ್ ಎಷ್ಟು!

ನಿಮ್ಮ ಹಾರ್ಟ್ ರೇಟ್ ಎಂದರೇನು?

ಹಾರ್ಟ್ ರೇಟ್ ಎಂದರೆ ಒಂದು ನಿಮಿಷದಲ್ಲಿ ನಿಮ್ಮ ಹೃದಯ ಎಷ್ಟು ಬಾರಿ ಬಡಿಯುತ್ತದೆ ಎಂಬ ಲೆಕ್ಕ. ನೀವು ಪ್ರತಿನಿತ್ಯದ ಬದುಕಿನಲ್ಲಿ ಮಾಡುವ ಪ್ರತಿಯೊಂದು ಚಟುವಟಿಕೆಗೆ ತಕ್ಕಂತೆ ನಿಮ್ಮ ದೇಹದ ಹೃದಯ ಬಡಿತ ಬದಲಾಗುತ್ತಿರುತ್ತದೆ. ನೀವು ಹೆಚ್ಚು ಉತ್ಸಾಹಿತರಾಗಿದ್ದಾಗ, ಸಕ್ರಿಯರಾಗಿದ್ದಾಗ ಅಥವಾ ಭಯಗೊಂಡಾಗ ನಿಮ್ಮ ಹೃದಯ ಬಡಿತ ವೇಗವಾಗುತ್ತದೆ ಮತ್ತು ನೀವು ವಿಶ್ರಾಂತಿ ಮಾಡುತ್ತಿರುವಾಗ, ಆರಾಮದಾಯಕ ಸ್ಥಿತಿಯಲ್ಲಿ ಇರುವಾಗ ಅಥವಾ ಶಾಂತವಾಗಿರುವಾಗ ಹೃದಯ ಬಡಿತ ನಿಧಾನವಾಗಿರುತ್ತದೆ. ಈ ಹಾರ್ಟ್ ರೇಟ್ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸೂಚಿಸುವ ಒಂದು ಮಾಪಕವಾಗಿದೆ ಎನ್ನುವುದು ಗಮನಾರ್ಹ. ಹಾರ್ಟ್ ರೇಟ್ ತುಂಬಾ ಕಡಿಮೆ ಅಥವಾ ತುಂಬಾ ಜಾಸ್ತಿ ಇದ್ದರೆ ಅದು ಹೃದಯ ರೋಗದ ಸಂಕೇತವಾಗಿರಬಹುದು. ವಿಶೇಷ ಎಂದರೆ ನಿಮ್ಮ ವೈದ್ಯರು ನಿಮ್ಮ ಹಾರ್ಟ್ ರೇಟ್ ಅನ್ನು ಗಮನಿಸಿ ಯಾವುದಾದರೂ ವೈದ್ಯಕೀಯ ಸಮಸ್ಯೆ ಇದ್ದರೆ ಅದನ್ನು ಗುರುತಿಸಬಹುದಾಗಿದೆ.

ನಿಮ್ಮ ಹಾರ್ಟ್ ರೇಟ್ ಮತ್ತು ನಾಡಿಮಿಡಿತದಲ್ಲಿ ವ್ಯತ್ಯಾಸವಿದೆಯೇ?

ನಿಮ್ಮ ಹಾರ್ಟ್ ರೇಟ್ ಮತ್ತು ಪಲ್ಸ್ ರೇಟ್ (ನಾಡಿಮಿಡಿತ) ಒಂದಕ್ಕೊಂದು ಸಂಬಂಧಿಸಿವೆ. ಆದರೆ ಇವೆರಡೂ ಒಂದೇ ಅಲ್ಲ.

ನಿಮ್ಮ ಹಾರ್ಟ್ ರೇಟ್ ಒಂದು ನಿಮಿಷದಲ್ಲಿ ನಿಮ್ಮ ಹೃದಯ ಎಷ್ಟು ವೇಗವಾಗಿ ಬಡಿಯುತ್ತದೆ ಎಂಬುದನ್ನು ತಿಳಿಸುತ್ತದೆ. ಪಲ್ಸ್ ರೇಟ್ ನೀವು ಆ ಹೃದಯ ಬಡಿತವನ್ನು ಹೇಗೆ ಅನುಭವಿಸುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ. ನಿಮ್ಮ ಹೃದಯ ಬಡಿಯುವಾಗ, ರಕ್ತವು ಧಮನಿಗಳ ಜಾಲದ ಮೂಲಕ ಹರಿಯುತ್ತದೆ. ಹೃದಯವು ರಕ್ತವನ್ನು ದೇಹದಾದ್ಯಂತ ಸಂಚರಿಸಲು ತಳ್ಳುವಾಗ ಧಮನಿಗಳಲ್ಲಿ ಒತ್ತಡವು ಏರುವುದನ್ನು ಪಲ್ಸ್ ರೇಟ್ ಅಥವಾ ನಾಡಿಮಿಡಿತ ಎನ್ನಬಹುದು.

ಹೃದಯ ಬಡಿತಗಳ ನಡುವೆ ನಿಮ್ಮ ಹೃದಯ ವಿಶ್ರಾಂತಿ ಪಡೆಯುತ್ತದೆ ಮತ್ತು ಒತ್ತಡ ಮತ್ತೆ ಕಡಿಮೆಯಾಗುತ್ತದೆ. ಆದ್ದರಿಂದ, ನೀವು ನಿರಂತರ ಒತ್ತಡ ಅನುಭವಿಸುವ ಬದಲಿಗೆ ಒಂದೇ ಬಾರಿ ಒತ್ತಡ ಉಂಟಾದಂತೆ ಹೃದಯ ಬಡಿತವನ್ನು ಅನುಭವಿಸುತ್ತೀರಿ. ಸಾಮಾನ್ಯವಾಗಿ ನಾರ್ಮಲ್ ಹಾರ್ಟ್ ರೇಟ್ ವ್ಯಕ್ತಿಯು ದೈಹಿಕವಾಗಿ ಫಿಟ್ ಆಗಿರುವುದನ್ನು ಸೂಚಿಸುತ್ತದೆ. ಇದರರ್ಥ, ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಮತ್ತು ಉತ್ತಮ ಸ್ಥಿತಿಯಲ್ಲಿ ಇರಿಸಲು ನಿಮ್ಮ ಹೃದಯವು ವೇಗವಾಗಿ ಬಡಿಯುವ ಅಗತ್ಯವಿಲ್ಲ.

ನಿಮ್ಮ ನಾಡಿಮಿಡಿತವನ್ನು ತಿಳಿಯುವ ವಿಭಿನ್ನ ದಾರಿ ಯಾವುದು ಮತ್ತು ಅದು ಯಾಕೆ ಮುಖ್ಯ?

ನಿಮ್ಮ ದೇಹದ ಕೆಲವು ಭಾಗಗಳಲ್ಲಿ ನಾಡಿಮಿಡಿತವನ್ನು ಸುಲಭವಾಗಿ ತಿಳಿಯಬಹುದು. ದೇಹದ ಯಾವ್ಯಾವ ಭಾಗಗಳಲ್ಲಿ ನಿಮ್ಮ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಬಳಸಿ ನಾಡಿಮಿಡಿತವನ್ನು ತಿಳಿಯಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

  • ಕತ್ತು: ನಿಮ್ಮ ಕಿವಿಯ ಕೆಳಗಿನ ಮೆತ್ತಗಿನ ಭಾಗದಿಂದ ಆರಂಭಿಸಿ ನಿಮ್ಮ ಬೆರಳನ್ನು ಸ್ವಲ್ಪ ಕೆಳಗೆ ಸರಿಸಿ. ಹಾಗೆ ನಿಮ್ಮ ದವಡೆಯ ಮೂಳೆಯ ಕೆಳಗೆ ನಿಮ್ಮ ನಾಡಿಮಿಡಿತವನ್ನು ತಿಳಿಯಬಹುದು.
  • ಕೈಗಂಟು: ನಿಮ್ಮ ಅಂಗೈ ಮೇಲಕ್ಕೆ ಇರುವಂತೆ ಕೈ ಇಟ್ಟುಕೊಂಡು ನಿಮ್ಮ ಹೆಬ್ಬೆರಳಿನ ಸ್ನಾಯು ಕೈಗಂಟಿನೊಂದಿಗೆ ಸೇರುವ ಜಾಗದಲ್ಲಿ ನಾಡಿಮಿಡಿತ ತಿಳಿಯಬಹುದು.
  • ಮೊಣಕೈ ಒಳಗೆ: ನಿಮ್ಮ ಒಂದು ಕೈಯ ಬೆರಳುಗಳನ್ನು ನಿಮ್ಮ ಇನ್ನೊಂದು ಮೊಣಕೈ ಮಧ್ಯದ ಟೊಳ್ಳಾದ ಭಾಗಕ್ಕೆ ಕೊಂಡುಹೋಗಿ. ನಂತರ ಬೆರಳುಗಳನ್ನು ಚರ್ಮದ ಮೇಲೆ ದೇಹದ ಕಡೆಗೆ ಸರಿಸಿ. ಮೊಣಕೈ ಒಳಭಾಗದ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಪಲ್ಸ್ ಅನ್ನು ತಿಳಿಯಬಹುದು.

ಮೇಲೆ ತಿಳಿಸಿದ ಭಾಗಗಳ ಜೊತೆಗೆ ನಿಮ್ಮ ವೈದ್ಯರು ಇತರ ಭಾಗಗಳಲ್ಲಿಯೂ ನಿಮ್ಮ ಪಲ್ಸ್ ಅನ್ನು ಪರಿಶೀಲಿಸಬಹುದು. ತರಬೇತಿಯಿಲ್ಲದೆ ಈ ಭಾಗಗಳಲ್ಲಿ ಪಲ್ಸ್ ಕಂಡುಹಿಡಿಯುವುದು ಕಷ್ಟವಾದರೂ, ನಿಮ್ಮ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿಗಳು ನಿರ್ದಿಷ್ಟ ಸಮಸ್ಯೆಗಳನ್ನು ಕಂಡುಹಿಡಿಯಲು ಈ ಭಾಗಗಳಲ್ಲಿ ಪಲ್ಸ್ ತಿಳಿಯಲು ಮುಂದಾಗಬಹುದು. ಆ ಭಾಗಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ:

  • ಟೆಂಪೊರಲ್ (ಕಿವಿಯ ಕಾಲುವೆಯ ಮೇಲಿನ ಭಾಗ, ಕೆನ್ನೆ ಕಿವಿಯೊಂದಿಗೆ ಸೇರುವ ಭಾಗದಿಂದ
  • ಸ್ವಲ್ಪ ಮುಂದಕ್ಕೆ)
  • ಎದೆ ಭಾಗ (ನಿಮ್ಮ ಹೃದಯಕ್ಕಿಂದ ಸ್ವಲ್ಪ ಮೇಲಿನ ಸ್ಥಾನ)
    ಹೊಟ್ಟೆ
  • ತೊಡೆ ಮತ್ತು ದೇಹದ ಮೇಲ್ಭಾಗ ಸೇರುವ ಭಾಗ
  • ನಿಮ್ಮ ಮೊಣಕಾಲಿನ ಹಿಂದೆ
  • ನಿಮ್ಮ ಪಾದಗಳ ಮೇಲೆ.

ನಾಡಿಮಿಡಿತ ಬಳಸಿಕೊಂಡು ನನ್ನ ನಾರ್ಮಲ್ ಹಾರ್ಟ್ ರೇಟ್ ಅನ್ನು ಅಳೆಯುವುದು ಹೇಗೆ?

ನೀವು ಪಲ್ಸ್ ಕಂಡುಹಿಡಿದ ಬಳಿಕ (ಕತ್ತು ಅಥವಾ ಕೈಗಂಟಿನಲ್ಲಿ ಪಲ್ಸ್ ಕಂಡುಹಿಡಿಯುವುದು ಸುಲಭ) ಒಂದು ನಿಮಿಷದಲ್ಲಿ ನಿಮ್ಮ ಹೃದಯ ಬಡಿತವನ್ನು ಎಣಿಕೆ ಮಾಡುವ ಮೂಲಕ ಪಲ್ಸ್ ರೇಟ್ ಅನ್ನು ಅಳೆಯಬಹುದು. ನೀವು ಪಲ್ಸ್ ಅನ್ನು ವೇಗವಾಗಿ ಲೆಕ್ಕ ಹಾಕಬೇಕಾದರೆ ನಿಮಗೆ ಸ್ವಲ್ಪ ಗಣಿತ ಗೊತ್ತಿರುವ ಅಗತ್ಯವಿದೆ. ಕೆಳಗಿನವು ನಾರ್ಮಲ್ ಹಾರ್ಟ್ ಪಲ್ಸ್ ರೇಟ್ ಅನ್ನು ಲೆಕ್ಕಾಚಾರ ಮಾಡಲು ಸುಲಭವಾದ ಮಾರ್ಗವಾಗಿದೆ:

  • 10 ಸೆಕೆಂಡುಗಳ ಕಾಲ ನಿಮ್ಮ ಹೃದಯ ಬಡಿತವನ್ನು ಎಣಿಕೆ ಮಾಡಿ. 10 ಸೆಕೆಂಡುಗಳು ಮುಗಿದ ನಂತರ, ಆ ಸಂಖ್ಯೆಯನ್ನು 6 ರಿಂದ ಗುಣಿಸಿ.
  • 15 ಸೆಕೆಂಡುಗಳ ಕಾಲ ನಿಮ್ಮ ಹೃದಯ ಬಡಿತವನ್ನು ಎಣಿಕೆ ಮಾಡಿ. ಎಣಿಕೆ ಮುಗಿದ ನಂತರ, ಆ ಸಂಖ್ಯೆಯನ್ನು 4 ರಿಂದ ಗುಣಿಸಿ.
  • 30 ಸೆಕೆಂಡುಗಳ ಕಾಲ ಹೃದಯ ಬಡಿತವನ್ನು ಎಣಿಕೆ ಮಾಡಿ. 30 ಸೆಕೆಂಡುಗಳು ಮುಗಿದ ನಂತರ, ಆ ಸಂಖ್ಯೆಯನ್ನು 2 ರಿಂದ ಗುಣಿಸಿ.

ಈ ಮೂರು ಹಂತಗಳಲ್ಲಿ ಯಾವುದೇ ಹಂತದ ಲೆಕ್ಕಾಚಾರದಿಂದ ನೀವು ಪಡೆಯುವ ಉತ್ತರವು ನಿಮ್ಮ 'ಬೀಟ್ಸ್ ಪರ್ ಮಿನಿಟ್' ಆಗಿರುತ್ತದೆ, ಅದೇ ನಿಮ್ಮ ಹಾರ್ಟ್ ರೇಟ್ ಆಗಿರುತ್ತದೆ. ಬೀಟ್ಸ್ ಪರ್ ಮಿನಿಟ್ ಅನ್ನು 'ಬಿಪಿಎಂ' ಎಂದು ಹೇಳಲಾಗುತ್ತದೆ.

ನೀವು ಸಕ್ರಿಯವಾಗಿಲ್ಲದೇ ಇದ್ದಾಗ ನಿಮ್ಮ ಹಾರ್ಟ್ ರೇಟ್ ಅನ್ನು ಅಳೆಯುವಾಗ, ಅದು ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ಆಗಿರುತ್ತದೆ. ವ್ಯಾಯಾಮದ ಸಮಯದಲ್ಲಿ ನಿಮ್ಮ ಹಾರ್ಟ್ ರೇಟ್ ಅನ್ನು ಲೆಕ್ಕಾಚಾರ ಮಾಡುವುದು ನಿಮ್ಮ ವರ್ಕೌಟ್‌ ನ ತೀವ್ರತೆಯನ್ನು ತಿಳಿಯಲು ಉತ್ತಮ ಮಾರ್ಗವಾಗಿದೆ.

ನಾನು ನನ್ನ ಕಿವಿಗಳಲ್ಲಿ ನಾಡಿಮಿಡಿತವನ್ನು ಕೇಳಬಹುದೇ?

ಹೌದು, ನೀವು ನಿಮ್ಮ ಕಿವಿಗಳಲ್ಲಿ ಪಲ್ಸ್ ಶಬ್ದವನ್ನು ಅಥವಾ ನಾಡಿಮಿಡಿತವನ್ನು ಕೇಳಬಹುದು. ನಿಮ್ಮ ತಲೆಯನ್ನು ಕೈ ಅಥವಾ ತೋಳಿನ ಮೇಲೆ ಇರಿಸಿದಾಗ ನಾಡಿಯ ಕಂಪನವನ್ನು ಕೇಳಬಹುದು. ಆದರೆ, ನೀವು ಸ್ಥಾನವನ್ನು ಬದಲಾಯಿಸಿದಾಗ ಈ ಶಬ್ದ ಕೇಳಿಸುವುದಿಲ್ಲ. ಆದರೆ ಸ್ಥಾನ ಬದಲಾಯಿಸಿದ ನಂತರವೂ ಪಲ್ಸ್ ಶಬ್ದ ನಿಮಗೆ ಕೇಳಿಸಿದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಹಾರ್ಟ್ ರೇಟ್ ಎಷ್ಟಿದ್ದರೆ ಒಳಿತು?

ನಿಮ್ಮ ದೇಹದ ನಾರ್ಮಲ್ ಹಾರ್ಟ್ ಪಲ್ಸ್ ರೇಟ್ ನಿಮ್ಮ ವಯಸ್ಸು ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ವಯಸ್ಸಿನ ಆಧಾರದ ಮೇಲೆ ಹೇಳುವುದಾದರೆ ನಾರ್ಮಲ್ ಹಾರ್ಟ್ ರೇಟ್ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಮಕ್ಕಳ ನಿರೀಕ್ಷಿತ ರೆಸ್ಟಿಂಗ್ ಹಾರ್ಟ್ ರೇಟ್ ಈ ಕೆಳಗಿನಂತಿದೆ:

  • ಹೊಸದಾಗಿ ಜನಿಸಿದ ಮಕ್ಕಳು (4 ವಾರಗಳವರೆಗೆ): 100 - 205 ಬಿಪಿಎಂ
  • ಶಿಶು (4 ವಾರಗಳಿಂದ 1 ವರ್ಷ): 100 - 180 ಬಿಪಿಎಂ
  • ತೊದಲುವ ಮಗು (1 ರಿಂದ 3 ವರ್ಷ): 98 - 140 ಬಿಪಿಎಂ
  • ಪ್ರೀ ಸ್ಕೂಲ್ ಮಕ್ಕಳು (3 ರಿಂದ 5 ವರ್ಷ): 80 - 120 ಬಿಪಿಎಂ
  • ಶಾಲಾ ವಯಸ್ಸಿನವರು (5 ರಿಂದ 12 ವರ್ಷ): 75 - 118 ಬಿಪಿಎಂ
  • ಹದಿಹರೆಯದವರು (13 ರಿಂದ 18 ವರ್ಷ): 60 - 100 ಬಿಪಿಎಂ

ಮೇಲೆ ತಿಳಿಸಿದ ಮಕ್ಕಳ ರೆಸ್ಟಿಂಗ್ ಹಾರ್ಟ್ ರೇಟ್ ಅವರು ಎಚ್ಚರವಿರುವ ಸಮಯದ್ದು. ಅವರು ನಿದ್ದೆಯಲ್ಲಿರುವಾಗ ಹಾರ್ಟ್ ರೇಟ್ ಕಡಿಮೆ ಇರುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ, ಈ ವಯಸ್ಸಿನ ಆಧಾರದ ಮೇಲೆ ನಾರ್ಮಲ್ ಹಾರ್ಟ್ ರೇಟ್ ಸುಮಾರು 60-100 ಬಿಪಿಎಂ ಆಗಿರುತ್ತದೆ.

ನಾರ್ಮಲ್ ಹಾರ್ಟ್ ರೇಟ್ ಎಂದರೇನು?

ವಯಸ್ಕರಲ್ಲಿ ನಾರ್ಮಲ್ ಹಾರ್ಟ್ ಪಲ್ಸ್ ರೇಟ್ 60-100 ಬಿಪಿಎಂ ನಡುವೆ ಇರುತ್ತದೆ. ನಿಮ್ಮ ಪಲ್ಸ್ ಎಣಿಕೆಯ ಮೂಲಕ ರೆಸ್ಟಿಂಗ್ ಹಾರ್ಟ್ ರೇಟ್ ಅನ್ನು ಅಳೆಯಬಹುದು.
ಸಾಮಾನ್ಯವಾಗಿ, ಕಡಿಮೆ ಹಾರ್ಟ್ ರೇಟ್ ಉತ್ತಮ ದೇಹಾರೋಗ್ಯ ಮತ್ತು ಅತ್ಯುತ್ತಮ ಹೃದಯದ ಫಿಟ್‌ನೆಸ್ ಅನ್ನು ಹೊಂದಿರುವುದನ್ನು ಸೂಚಿಸುತ್ತದೆ. ಉದಾಹರಣೆಗೆ, ಚೆನ್ನಾಗಿ ತರಬೇತಿ ಪಡೆದ ಕ್ರೀಡಾಪಟುವಿನ ನಾರ್ಮಲ್ ಹಾರ್ಟ್ ರೇಟ್ ಸುಮಾರು 40 ಬಿಪಿಎಂ ಆಗಿರಬಹುದು.

ಫಾಸ್ಟ್ ಪಲ್ಸ್ ರೇಟ್ ಎಂದರೇನು?

ವಯಸ್ಕರು ರೆಸ್ಟಿಂಗ್ ಸ್ಥಿತಿಯಲ್ಲಿ ಇರುವ 100 ಬಿಪಿಎಂ ಗಿಂತ ಹೆಚ್ಚಿನ ಹಾರ್ಟ್ ರೇಟ್ ಇದ್ದರೆ ಅದನ್ನು ಫಾಸ್ಟ್ ಪಲ್ಸ್ ರೇಟ್ ಎಂದು ಕರೆಯಲಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಟಾಕಿಕಾರ್ಡಿಯಾ ಎಂದು ಕರೆಯಲಾಗುತ್ತದೆ. ವೇಗವಾದ ಹೃದಯ ಬಡಿತಕ್ಕೆ ಕೆಲವು ಸಾಮಾನ್ಯ ಕಾರಣಗಳು ಈ ಕೆಳಗಿನಂತಿವೆ:


• ಆಂಕ್ಸೈಟಿ ಅಥವಾ ತೀವ್ರ ಭಯ
• ಜ್ವರ ಅಥವಾ ಡೀಹೈಡ್ರೇಷನ್
• ಕೆಫೀನ್‌ ನಂತಹ ಉತ್ತೇಜಕಗಳು ಅಥವಾ ಕೆಲವು ಔಷಧಿಗಳು
• ಓವರ್ ಆಕ್ಟಿವ್ ಥೈರಾಯ್ಡ್ (ಹೈಪರ್‌ಥೈರಾಯ್ಡಿಸಂ)
• ಆಟ್ರಿಯಲ್ ಫಿಬ್ರಿಲೇಷನ್‌ ನಂತಹ ಹಾರ್ಟ್ ರಿದಂ ಡಿಸಾರ್ಡರ್ ಗಳು

ನೀವು ಆಗಾಗ್ಗೆ ವಿಶ್ರಾಂತಿ ಅಥವಾ ರೆಸ್ಟಿಂಗ್ ಸ್ಥಿತಿಯಲ್ಲಿ ನಿಮ್ಮ ಹೃದಯವು ವೇಗವಾಗಿ ಬಡಿಯುವುದನ್ನು ಗಮನಿಸಿದರೆ, ವಿಶೇಷವಾಗಿ ತಲೆತಿರುಗುವಿಕೆ, ಉಸಿರಾಟದ ತೊಂದರೆ ಅಥವಾ ಎದೆಯ ಅಸ್ವಸ್ಥತೆ ಅನುಭವಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಮುಖ್ಯ. ಅಸಾಮಾನ್ಯವಾದ ವೇಗವಾದ ಪಲ್ಸ್ ದರವು ಕಾಲಾನಂತರ ಹೃದಯಕ್ಕೆ ಬಹಳ ಒತ್ತಡವನ್ನು ಉಂಟುಮಾಡಬಹುದು.

ಸ್ಲೋ ಪಲ್ಸ್ ರೇಟ್ ಎಂದರೇನು?

ವ್ಯಕ್ತಿಯು ಸಾಮಾನ್ಯವಾಗಿ ವಿಶ್ರಾಂತಿ ಸ್ಥಿತಿ ಅಥವಾ ರೆಸ್ಟಿಂಗ್ ನಲ್ಲಿ ಇದ್ದಾಗ 60 ಬಿಪಿಎಂ ಗಿಂತ ಕಡಿಮೆ ಹಾರ್ಟ್ ರೇಟ್ ಇದ್ದರೆ ಅದನ್ನು ಸ್ಲೋ ಪಲ್ಸ್ ರೇಟ್ ಎಂದು ವ್ಯಾಖ್ಯಾನಿಸಲಾಗುತ್ತದೆ. ವೈದ್ಯಕೀಯವಾಗಿ ಬ್ರಾಡಿಕಾರ್ಡಿಯಾ ಎನ್ನಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಸಾಮಾನ್ಯಕ್ಕಿಂತ ಕಡಿಮೆ ಹಾರ್ಟ್ ರೇಟ್ ಇದ್ದರೆ ಅದು ಚಿಂತೆಯ ವಿಷಯವಲ್ಲ. ಉದಾಹರಣೆಗೆ, ಚೆನ್ನಾಗಿ ತರಬೇತಿ ಪಡೆದ ಕ್ರೀಡಾಪಟುಗಳು ತಮ್ಮ ಹೃದಯದ ಉತ್ತಮ ಕಾರ್ಯಕ್ಷಮತೆಯಿಂದಾಗಿ 40 ಬಿಪಿಎಂ ಗಳಷ್ಟು ರೆಸ್ಟಿಂಗ್ ಹಾರ್ಟ್ ರೇಟ್ ಅನ್ನು ಹೊಂದಿರಬಹುದು.

ಸ್ಲೋ ಪಲ್ಸ್ ರೇಟ್ ಅಥವಾ ನಿಧಾನಗತಿಯ ನಾಡಿಮಿಡಿತ ಕೆಲವೊಮ್ಮೆ ಆರೋಗ್ಯ ಸಮಸ್ಯೆಯನ್ನು ಸೂಚಿಸಬಹುದು, ಉದಾಹರಣೆಗೆ:


• ಬೀಟಾ ಬ್ಲಾಕರ್‌ ಗಳಂತಹ ಕೆಲವು ಔಷಧಿಗಳು
• ಕಡಿಮೆ ಸಕ್ರಿಯವಾದ ಥೈರಾಯ್ಡ್ (ಹೈಪೋಥೈರಾಯ್ಡಿಸಂ)
• ಪೊಟ್ಯಾಸಿಯಂ‌ನಂತಹ ಎಲೆಕ್ಟ್ರೋಲೈಟ್‌ಗಳ ಅಸಮತೋಲನ
• ಹೃದಯದ ಸ್ವಾಭಾವಿಕ ಪೇಸ್‌ಮೇಕರ್‌ನಲ್ಲಿ ಸಮಸ್ಯೆ
• ವಯಸ್ಸಾಗುವಿಕೆ ಅಥವಾ ಹೃದಯ ರೋಗದಿಂದಾಗಿ ಹೃದಯಕ್ಕೆ ಹಾನಿ

ನೀವು ಕ್ರೀಡಾಪಟುವಲ್ಲದಿದ್ದರೆ, ಆಯಾಸ, ತಲೆತಿರುಗುವಿಕೆ ಅಥವಾ ಮೂರ್ಛೆಯಂತಹ ಲಕ್ಷಣಗಳೊಂದಿಗೆ ಸ್ಲೋ ಪಲ್ಸ್ ರೇಟ್ ಇದ್ದರೆ, ಅದಕ್ಕೆ ಕಾರಣವನ್ನು ಗುರುತಿಸಲು ವೈದ್ಯರನ್ನು ಭೇಟಿಯಾಗಬೇಕು.

ಅಪಾಯಕಾರಿ ಹಾರ್ಟ್ ರೇಟ್ ಎಂದರೇನು?

ಪಲ್ಸ್ ರೇಟ್ ಸಾಮಾನ್ಯಕ್ಕಿಂತ ಗಣನೀಯವಾಗಿ ಹೆಚ್ಚು ಅಥವಾ ಕಡಿಮೆಯಾಗಿರುವುದಕ್ಕೆ ಅಪಾಯಕಾರಿ ಹಾರ್ಟ್ ರೇಟ್ ಎನ್ನಲಾಗುತ್ತದೆ. ಇದರಿಂದ ಹೃದಯ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ಸಾಮಾನ್ಯವಾಗಿ ವಿಶ್ರಾಂತಿ ಸ್ಥಿತಿಯಲ್ಲಿ 120-150 ಬಿಪಿಎಂ ಗಿಂತ ಹೆಚ್ಚಿನ (ಟಾಕಿಕಾರ್ಡಿಯಾ) ಅಥವಾ 40-50 ಬಿಪಿಎಂ ಗಿಂತ ಕಡಿಮೆ ಪಲ್ಸ್ ರೇಟ್ (ತೀವ್ರ ಬ್ರಾಡಿಕಾರ್ಡಿಯಾ) ಇದ್ದರೆ ಅಪಾಯದ ಸೂಚನೆಯಾಗಿದೆ.

ಜೊತೆಗೆ ಹಾರ್ಟ್ ರೇಟ್ ನಲ್ಲಿ ಹಠಾತ್ ಬದಲಾವಣೆಗಳು ಅಥವಾ ಅನಿಯಮಿತ ಪಲ್ಸ್‌ ರೇಟ್ ಇದ್ದರೆ ತಕ್ಷಣವೇ ತಪಾಸಣೆ ಮಾಡುವುದು ಅಗತ್ಯ. ಅಪಾಯಕಾರಿ ಹಾರ್ಟ್ ರಿದಂಗಳು ಈ ರೀತಿಯ ಲಕ್ಷಣಗಳಲ್ಲಿ ಕಾಣಿಸಬಹುದು:
• ಎದೆಯ ನೋವು ಅಥವಾ ಒತ್ತಡ
• ಉಸಿರಾಟದ ತೊಂದರೆ
• ತಲೆತಿರುಗುವಿಕೆ ಅಥವಾ ಮೂರ್ಛೆ
• ಹೃದಯ ಬಡಿತ ಹೆಚ್ಚಳ

ಈ ಎಚ್ಚರಿಕೆಯ ಸಂಕೇತಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಶೇಷವಾಗಿ ನೀವು ಈಗಾಗಲೇ ಹೃದಯ ಸಮಸ್ಯೆಗಳ ಇತಿಹಾಸವನ್ನು ಹೊಂದಿದ್ದರೆ, ತಕ್ಷಣ ವೈದ್ಯಕೀಯ ಸೇವೆ ಪಡೆಯಿರಿ. ತ್ವರಿತ ಚಿಕಿತ್ಸೆಯು ಹೃದಯ ವೈಫಲ್ಯ, ಸ್ಟ್ರೋಕ್ ಅಥವಾ ಹೃದಯ ಸ್ಥಗಿತದಂತಹ ತೊಡಕುಗಳನ್ನು ತಡೆಯಬಹುದು.

ನಾನು ಯಾಕೆ ನನ್ನ ಹೃದಯದ ಲಯವನ್ನು ಪರಿಶೀಲಿಸಬೇಕು?

ನಿಮ್ಮ ಹೃದಯದ ಲಯವನ್ನು (ಹಾರ್ಟ್ ರಿದಂ) ನಿಯಮಿತವಾಗಿ ಪರಿಶೀಲಿಸುವುದರಿಂದ ನಿಮ್ಮ ಪಲ್ಸ್ ದರವನ್ನು ಟ್ರ್ಯಾಕ್ ಮಾಡಬಹುದು ಮತ್ತು ಯಾವುದೇ ತೊಂದರೆಗಳನ್ನು ಬೇಗನೆ ಗುರುತಿಸಬಹುದು. ನೀವು ಆರೋಗ್ಯವಾಗಿದ್ದರೂ, ಆಗಾಗ್ಗೆ ಸ್ವಯಂ-ತಪಾಸಣೆ ಮಾಡುವ ಮೂಲಕ ಲಕ್ಷಣರಹಿತ ಅರಿಥ್ಮಿಯಾಗಳನ್ನು ಸಮಸ್ಯೆಯಾಗುವ ಮೊದಲೇ ಪತ್ತೆ ಹಚ್ಚಬಹುದು.

ನಿಮ್ಮ ಹಾರ್ಟ್ ರೇಟ್ ಅನ್ನು ಮೇಲ್ವಿಚಾರಣೆ ಮಾಡಲು ಈ ಕಾರಣಗಳನ್ನು ಪರಿಗಣಿಸಿ:

· ಅನಿಯಮಿತ ಹೃದಯದ ಲಯಗಳನ್ನು ಗುರುತಿಸುವುದು: ಆಟ್ರಿಯಲ್ ಫಿಬ್ರಿಲೇಷನ್‌ ನಂತಹ ಹಾರ್ಟ್ ಅರಿಥ್ಮಿಯಾಗಳು ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ಹೊಂದಿರುವುದಿಲ್ಲ. ಪಲ್ಸ್ ಪರಿಶೀಲನೆ ಮಾಡುವುದರಿಂದ ಗಂಭೀರ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಬಹುದು.

· ಹೃದಯ ಆರೋಗ್ಯವನ್ನು ಮೌಲ್ಯಮಾಪನ ಮಾಡುವುದು: ಕಾಲಾನಂತರ ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ಅನ್ನು ಟ್ರ್ಯಾಕ್ ಮಾಡುವುದರಿಂದ ನಿಮ್ಮ ಹೃದಯದ ಫಿಟ್‌ನೆಸ್ ಅನ್ನು ಅಳೆಯಬಹುದು. ನಿಯಮಿತ ಏರೋಬಿಕ್ ವ್ಯಾಯಾಮದಿಂದ, ನಿಮ್ಮ ಹೃದಯವು ಬಲವಾಗುವಂತೆ ಮಾಡಾದರೆ ರೆಸ್ಟಿಂಗ್ ಹಾರ್ಟ್ ರೇಟ್ ಕಡಿಮೆಯಾಗಬಹುದು.

  • ಒತ್ತಡವನ್ನು ನಿರ್ವಹಿಸುವುದು: ಒತ್ತಡ ಮತ್ತು ಆತಂಕವು ಪಲ್ಸ್ ದರ ವೇಗವಾಗುವಂತೆ ಮಾಡಬಹುದು. ಆದ್ದರಿಂದ ನಿಮ್ಮ ಹೃದಯ ಲಯವನ್ನು ಮೇಲ್ವಿಚಾರಣೆ ಮಾಡುವುದರಿಂದ ವಿಶ್ರಾಂತಿ ಮತ್ತು ಸ್ವಯಂ-ಆರೈಕೆಗೆ ಆದ್ಯತೆ ನೀಡುವ ಕಡೆ ಗಮನ ಹರಿಸಬಹುದು.
  • ಔಷಧಿಗಳನ್ನು ಅಡ್ಜಸ್ಟ್ ಮಾಡುವುದು: ಬೀಟಾ ಬ್ಲಾಕರ್‌ ಗಳಂತಹ ಹೃದಯ ಸಂಬಂಧಿ ಔಷಧಿಗಳನ್ನು ತೆಗೆದುಕೊಳ್ಳುವವರಿಗೆ, ನಿಮ್ಮ ಹಾರ್ಟ್ ರೇಟ್ ಅನ್ನು ಪರಿಶೀಲಿಸುವುದರಿಂದ ನಿಮ್ಮ ಔಷಧಿಯು ಆರೋಗ್ಯಕರ ವ್ಯಾಪ್ತಿಯಲ್ಲಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ.

ವ್ಯಾಯಾಮವು ಹಾರ್ಟ್ ರೇಟ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವ್ಯಾಯಾಮವು ಹೃದಯ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ದೈಹಿಕ ಚಟುವಟಿಕೆಯ ಸಮಯದಲ್ಲಿ ನಿಮ್ಮ ಎದೆ ಬಡಿತವನ್ನು ಮೇಲ್ವಿಚಾರಣೆ ಮಾಡುವುದು ನಿಮ್ಮ ವರ್ಕೌಟ್‌ ಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ನಿಮ್ಮ ಹೃದಯವು ಸ್ನಾಯುಗಳಿಗೆ ಆಕ್ಸಿಜನ್‌ಯುಕ್ತ ರಕ್ತವನ್ನು ತಲುಪಿಸಲು ಶ್ರಮಿಸುವುದರಿಂದ, ವ್ಯಾಯಾಮದ ತೀವ್ರತೆಗೆ ಅನುಗುಣವಾಗಿ ನಿಮ್ಮ ಪಲ್ಸ್ ಏರುತ್ತದೆ.

ಈ ಏರಿಕೆಯ ವ್ಯಾಪ್ತಿಯು ನಿಮ್ಮ ವಯಸ್ಸು, ಫಿಟ್‌ನೆಸ್ ಮಟ್ಟ ಮತ್ತು ಗರಿಷ್ಠ ಹಾರ್ಟ್ ರೇಟ್ ಗಳಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಗರಿಷ್ಠ ಹಾರ್ಟ್ ರೇಟ್ ಅನ್ನು ಅಂದಾಜು ಮಾಡಲು ಸಾಮಾನ್ಯ ಸೂತ್ರವೆಂದರೆ 220 ರಿಂದ ನಿಮ್ಮ ವಯಸ್ಸನ್ನು ಕಳೆಯಿರಿ. ಆದ್ದರಿಂದ, 40 ವರ್ಷದ ವ್ಯಕ್ತಿಗೆ, ನಿರೀಕ್ಷಿತ ಗರಿಷ್ಠ ದರವು 180 ಬಿಪಿಎಂ ಆಗಿರುತ್ತದೆ. ಮಧ್ಯಮ ತೀವ್ರತೆಯ ವ್ಯಾಯಾಮ ಮಾಡುವ ಸಮಯದಲ್ಲಿ, ಹಾರ್ಟ್ ರೇಟ್ ಗರಿಷ್ಠ ಶೇ.50-70 ರಷ್ಟು ಇರಬೇಕು, ಅಂದರೆ 90-126 ಬಿಪಿಎಂ ನಷ್ಟಿರಬೇಕು. ತೀವ್ರವಾದ ವ್ಯಾಯಾಮ ಮಾಡುವಾಗ ಶೇ.70-85ರಷ್ಟು ಹೆಚ್ಚಾಗುತ್ತದೆ ಅಥವಾ 126-153 ಬಿಪಿಎಂ ಇರುತ್ತದೆ.

ಕಾಲಾನಂತರ, ನಿಯಮಿತ ಕಾರ್ಡಿಯೋ ವ್ಯಾಯಾಮ ಮಾಡುವ ಮೂಲಕ ನಿಮ್ಮ ರೆಸ್ಟಿಂಗ್ ನಾರ್ಮಲ್ ಹಾರ್ಟ್ ರೇಟ್ ಅನ್ನು ಕಡಿಮೆ ಮಾಡಬಹುದು. ಏಕೆಂದರೆ ನಿಮ್ಮ ಹೃದಯವು ಆಗ ಹೆಚ್ಚು ಕಾರ್ಯಕ್ಷಮತೆ ಹೊಂದುತ್ತದೆ. ಉದಾಹರಣೆಗೆ, ಕಡಿಮೆ ಚಟುವಟಿಕೆಯ ವ್ಯಕ್ತಿಯ ರೆಸ್ಟಿಂಗ್ ಪಲ್ಸ್ 80 ಬಿಪಿಎಂ ಆಗಿರಬಹುದು, ಆದರೆ ಕ್ರೀಡಾಪಟುವಿನದು 50 ಬಿಪಿಎಂ ಆಗಿರಬಹುದು. ಮುಖ್ಯವಾಗಿ, ನಿಮ್ಮ ಮೂಲ ಮತ್ತು ಟಾರ್ಗೆಟ್ ರೇಟ್ ಅನ್ನು ತಿಳಿದುಕೊಂಡು, ತಲೆತಿರುಗುವಿಕೆ ಅಥವಾ ಉಸಿರಾಟದ ತೊಂದರೆ ಎದುರಾದರೆ ತಕ್ಷಣ ಚಟುವಟಿಕೆಗಳನ್ನು ನಿಲ್ಲಿಸಬೇಕು.

ಹಾರ್ಟ್ ಬೀಟ್ ಮೇಲೆ ಪರಿಣಾಮ ಬೀರುವ ಅಂಶಗಳಾವುವು?

ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರಿರಬಹುದು ಮತ್ತು ಅದರಿಂದ ಹಾರ್ಟ್ ರೇಟ್ ವೇಗವಾಗುವುದು ಅಥವಾ ನಿಧಾನವಾಗುವುದಕ್ಕೆ ಕಾರಣವಾಗಬಹುದು. ಇಂತಹ ಕೆಲವು ಅಂಶಗಳನ್ನು ಈ ಕೆಳಗೆ ನೋಡೋಣ:

  • ಭಾವನೆಗಳು ಮತ್ತು ಆತಂಕ (ಆಂಕ್ಸೈಟಿ) ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ಅನ್ನು ಬದಲಾಯಿಸಬಹುದು. ನೀವು ಖಿನ್ನತೆಗೆ ಒಳಗಾದಾಗ ಅಥವಾ ಆತಂಕಗೊಂಡಾಗ, ನಿಮ್ಮ ದೇಹವು ಅಡ್ರಿನಾಲಿನ್ ಮತ್ತು ಕಾರ್ಟಿಸಾಲ್‌ ನಂತಹ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ನಿಮ್ಮ ಹೃದಯವು ತೀವ್ರವಾಗಿ ಬಡಿಯಲು ಕಾರಣವಾಗಬಹುದು.
  • ದೇಹದ ತಾಪಮಾನವೂ ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ಮೇಲೆ ಪರಿಣಾಮ ಬೀರುತ್ತದೆ. ಬಿಸಿಯಾದಾಗ, ನಿಮ್ಮ ದೇಹವು ತಂಪಾಗಲು ಶಾಖವನ್ನು ಹೊರಹಾಕುತ್ತದೆ. ಇದು ನಿಮ್ಮ ಹಾರ್ಟ್ ರೇಟ್ ಅನ್ನು ಹೆಚ್ಚಿಸುತ್ತದೆ.
  • ನಿಮ್ಮ ವಯಸ್ಸು ಕೂಡ ಸಾಮಾನ್ಯವಾಗಿ ನಿಮ್ಮ ಹಾರ್ಟ್ ರೇಟ್ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ವೃದ್ಧಾಪ್ಯದಲ್ಲಿ, ನೀವು ಯೌವನದಲ್ಲಿದ್ದಾಗಿನಂತೆ ನಿಮ್ಮ ಹೃದಯವು ವೇಗವಾಗಿ ಬಡಿಯಲಾರದು.

ನನ್ನ ರೆಸ್ಟಿಂಗ್ ನಾರ್ಮಲ್ ಹಾರ್ಟ್ ರೇಟ್ ನಿರೀಕ್ಷಿತ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಏನು ಮಾಡಬೇಕು?

ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ನಿರಂತರವಾಗಿ 100 ಬಿಪಿಎಂ ಗಿಂತ ಹೆಚ್ಚಿರುವುದಾದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಇಂತಹ ಸ್ಥಿತಿಯನ್ನು ಟಾಕಿಕಾರ್ಡಿಯಾ ಎಂದು ಕರೆಯಲಾಗುತ್ತದೆ. ಒಬ್ಬ ತರಬೇತಿ ಪಡೆದ ಕ್ರೀಡಾಪಟುವಲ್ಲದಿದ್ದರೆ ಮತ್ತು ನಿಮ್ಮ ಹಾರ್ಟ್ ರೇಟ್ 60 ಬಿಪಿಎಂ ಗಿಂತ ಕಡಿಮೆಯಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಈ ಸ್ಥಿತಿಯನ್ನು ಬ್ರಾಡಿಕಾರ್ಡಿಯಾ ಎಂದು ಕರೆಯಲಾಗುತ್ತದೆ.

ಇದಲ್ಲದೆ, ನಿಧಾನವಾದ ನಾರ್ಮಲ್ ಹಾರ್ಟ್ ಪಲ್ಸ್ ರೇಟ್ ಜೊತೆಗೆ ಈ ಕೆಳಗಿನ ಯಾವುದೇ ಲಕ್ಷಣಗಳಿದ್ದರೆ, ನೀವು ವೈದ್ಯಕೀಯ ತಜ್ಞರನ್ನು ಸಂಪರ್ಕಿಸಬೇಕು:

  • ಎದೆಯ ನೋವು
  • ಗೊಂದಲ ಮತ್ತು ಸ್ಮರಣ ಸಮಸ್ಯೆಗಳು
  • ತಲೆತಿರುಗುವಿಕೆ
  • ಎನರ್ಜಿಯ ಕೊರತೆ
  • ಹೃದಯದಲ್ಲಿ ಢವಗುಟ್ಟುವಿಕೆ

ನನ್ನ ಟಾರ್ಗೆಟ್ ಯಾವುದು ಮತ್ತು ಗರಿಷ್ಠ ಹಾರ್ಟ್ ರೇಟ್ ಯಾವುವು?

ಮಧ್ಯಮ ತೀವ್ರತೆಯ ವ್ಯಾಯಾಮ ಮಾಡುತ್ತಿರುವ ಸಮಯದಲ್ಲಿಯೂ ನಿಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಿದರೆ ಅದನ್ನೇ ಐಡಿಯಲ್ ರೇಂಜ್ ಎನ್ನಲಾಗುತ್ತದೆ. ಆ ರೇಂಜ್ ಹೊಂದುವುದೇ ನಿಮ್ಮ ಗುರಿಯಾಗಬೇಕಿದೆ. ಮಧ್ಯಮ ತೀವ್ರತೆಯ ವ್ಯಾಯಾಮವು ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ದೇಹದ ಮೇಲೆ ಒತ್ತಡವನ್ನು ಉಂಟುಮಾಡುವುದಿಲ್ಲ.

ತುಂಬಾ ಶ್ರಮದಾಯಕವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ಗರಿಷ್ಠ ರೆಸ್ಟಿಂಗ್ ಹಾರ್ಟ್ ರೇಟ್ ಶೇ.95 ವರೆಗೆ ತಲುಪುವಂತೆ ಮಾಡುತ್ತದೆ. ಆದರೆ, ತುಂಬಾ ಎತ್ತರಕ್ಕೆ ಹೋಗದಂತೆ ನೋಡಿಕೊಳ್ಳಬೇಕು, ಏಕೆಂದರೆ ಹೃದಯದ ಮೇಲೆ ಅತಿಯಾದ ಒತ್ತಡ ಬಿದ್ದರೆ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಾಗಬಹುದು.

ನೀವು ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೂ, ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು, ವಿಶೇಷವಾಗಿ ನೀವು ಯಾವುದೇ ಹೃದಯ ರೋಗವನ್ನು ಹೊಂದಿದ್ದರೆ, ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರೊಂದಿಗೆ ಅಥವಾ ವೈದ್ಯರೊಂದಿಗೆ ಮಾತನಾಡಬೇಕು. ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರು ನಿಮ್ಮ ಆರೋಗ್ಯವನ್ನು ಹಾಳು ಮಾಡದೆ ನಾರ್ಮಲ್ ಪಲ್ಸ್ ರೇಟ್ ಅನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿಯಾದ ಮತ್ತು ಸುರಕ್ಷಿತ ವಿಧಾನಗಳನ್ನು ಮಾರ್ಗದರ್ಶನ ಮಾಡುತ್ತಾರೆ.

ನಿಮ್ಮ ಟಾರ್ಗೆಟ್ ರೇಟ್ ಮತ್ತು ಗರಿಷ್ಠ ಹಾರ್ಟ್ ರೇಟ್ ಗಳನ್ನು ತಿಳಿಯಲು ಈ ಕೇಳಗಿನ ಚಾರ್ಟ್ ನೋಡಿ:

ವಯಸ್ಸು

ಗರಿಷ್ಠ ಹಾರ್ಟ್ ರೇಟ್

ವಯಸ್ಸಿನ ಪ್ರಕಾರ ನಾರ್ಮಲ್ ಹಾರ್ಟ್ ರೇಟ್

20

200

120 ರಿಂದ 160

25

195

117 ರಿಂದ 156

30

190

114 ರಿಂದ 152

35

185

111 ರಿಂದ 148

40

180

108 ರಿಂದ 144

45

175

105 ರಿಂದ 140

50

170

102 ರಿಂದ 136

55

165

99 ರಿಂದ 132

60

160

96 ರಿಂದ 128

65

155

93 ರಿಂದ 124

70

150

90 ರಿಂದ 120

75

145

87 ರಿಂದ 116

80

140

84 ರಿಂದ 112

85

135

81 ರಿಂದ 108

90

130

78 ರಿಂದ 104

95

125

75 ರಿಂದ 100

100

120

72 ರಿಂದ 96

ಗರಿಷ್ಠ ಮತ್ತು ಟಾರ್ಗೆಟ್ ರೇಟ್ ಗಳನ್ನು ತಿಳಿಯಲು ಗಣಿತದ ಸರಳ ಟ್ರಿಕ್ ಪಾಲಿಸಿ:

• 220 - ನಿಮ್ಮ ವಯಸ್ಸು = ನಿಮ್ಮ ಗರಿಷ್ಠ ಹಾರ್ಟ್ ರೇಟ್
• ಗರಿಷ್ಠ * 0.6 = ನಿಮ್ಮ ಲೋ ಎಂಡ್ ಟಾರ್ಗೆಟ್ ರೇಂಜ್ ಆಗಿದೆ

• ಗರಿಷ್ಠ * 0.8 = ನಿಮ್ಮ ಹೈಯರ್ ಎಂಡ್ ಟಾರ್ಗೆಟ್ ರೇಂಜ್ ಆಗಿದೆ

ಉದಾಹರಣೆಗೆ, ನಿಮ್ಮ ವಯಸ್ಸು 20 ವರ್ಷಗಳಾದರೆ, ನಿಮ್ಮ ಗರಿಷ್ಠ ಹೃದಯ ದರವು ಸುಮಾರು 200 ಬಿಪಿಎಂ (ಅಂದರೆ, 220-20=200). ಈ ವಯಸ್ಸಿನಲ್ಲಿ, ನಿಮ್ಮ ಲೋ ಎಂಡ್ ಟಾರ್ಗೆಟ್ ಸುಮಾರು 120 ಬಿಪಿಎಂ (ಅಂದರೆ, 2000.6=120) ಆಗಿತ್ತು ಮತ್ತು ಹೈ ಎಂಡ್ ಟಾರ್ಗೆಟ್ ಸುಮಾರು 160 ಬಿಪಿಎಂ (ಅಂದರೆ, 2000.8=160 ಬಿಪಿಎಂ) ಆಗಿರುತ್ತದೆ.

ನನ್ನ ನಾರ್ಮಲ್ ಹಾರ್ಟ್ ರೇಟ್ ಕುರಿತು ನನಗೆ ಆತಂಕವಿದೆ, ಈಗ ನಾನೇನು ಮಾಡಬೇಕು?

ನಿಮ್ಮ ರೆಸ್ಟಿಂಗ್ ಹಾರ್ಟ್ ರೇಟ್ ಬಗ್ಗೆ ಚಿಂತೆಯಿದ್ದರೆ, ನೀವು ನಿಮ್ಮ ವೈದ್ಯರನ್ನು ಅಥವಾ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು. ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ವ್ಯಕ್ತಿಗಳಾಗಿದ್ದಾರೆ ಅಥವಾ ಅಗತ್ಯವಿದ್ದರೆ ನಿಮ್ಮನ್ನು ತಜ್ಞರ ಬಳಿಗೆ ಕಳುಹಿಸಬಹುದು.

ನೀವು ಈ ಕೆಳಗಿನ ಯಾವುದೇ ಲಕ್ಷಣಗಳನ್ನು ಅನುಭವಿಸಿದರೆ, ನೀವು ತಕ್ಷಣ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು:

  • ನಿರಂತರವಾಗಿ ತುಂಬಾ ಜಾಸ್ತಿ ಅಥವಾ ತುಂಬಾ ಕಡಿಮೆಯಾದ ರೆಸ್ಟಿಂಗ್ ಹಾರ್ಟ್ ಪಲ್ಸ್ ರೇಟ್.
  • ಅನಿಯಮಿತ ಹೃದಯ ಬಡಿತ ಅಥವಾ ಕಾಲಕಾಲಕ್ಕೆ ತಪ್ಪುವ ಬಡಿತ.
  • ನಿಮ್ಮ ಪಲ್ಸ್ ಎಣಿಕೆಯ ಸಮಯದಲ್ಲಿ ಒಂದೇ 'ಬಡಿತದ' ಬದಲಿಗೆ ಕಂಪನ ಉಂಟಾಗುವ ಸಂವೇದನೆಯನ್ನು ಪಡೆಯುವುದು. ಈ ಸ್ಥಿತಿಯನ್ನು 'ಥ್ರಿಲ್' ಎಂದು ಕರೆಯಲಾಗುತ್ತದೆ ಮತ್ತು ಇದು ಹೃದಯ ಸಂಬಂಧಿತ ಸಮಸ್ಯೆಗಳನ್ನು ಸೂಚಿಸುತ್ತದೆ.
  • ನೀವು ಸಾಮಾನ್ಯ ಪಲ್ಸ್ ರೇಟ್ ಶ್ರೇಣಿಯನ್ನು ಹೊಂದದೆ ನಿಮ್ಮ ಹೃದಯ ಬಡಿತದ ಅಹಿತಕರ ಸಂವೇದನೆಯನ್ನು ಪಡೆಯುವುದಾದರೆ ಅಂದರೆ ಹೃದಯ ಢವಗುಡುವಿಕೆ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ವಾರ್ಷಿಕ ಆರೋಗ್ಯ ತಪಾಸಣೆಗೆ ಹೋಗಲು ಸಲಹೆ ನೀಡಲಾಗುತ್ತದೆ. ಇದರಿಂದ ಆರೋಗ್ಯ ಸೇವಾ ಪೂರೈಕೆದಾರರು ಹಾರ್ಟ್ ರೇಟ್ ಅನ್ನು ಅಳೆಯಬಹುದು ಮತ್ತು ಯಾವುದೇ ಹೃದಯ ಸಂಬಂಧಿತ ಸಮಸ್ಯೆಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ನೀಡಬಹುದು.

ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ಕೆಲವು ಹಾರ್ಟ್ ರೇಟ್ ವ್ಯತ್ಯಯವು ಸಾಮಾನ್ಯವಾದರೂ, ಕೆಲವು ಲಕ್ಷಣಗಳು ವೈದ್ಯಕೀಯ ಗಮನವನ್ನು ಬೇಡುತ್ತವೆ. ಹಾಗಾಗಿ ನಿಮಗೆ ಈ ಕೆಳಗಿನ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ:

· ವಿಶ್ರಾಂತಿ ಸ್ಥಿತಿಯಲ್ಲಿ 120 ಬಿಪಿಎಂ ಗಿಂತ ಹೆಚ್ಚಿನ ವೇಗವಾದ ಪಲ್ಸ್ ದರ ಅಥವಾ 40 ಬಿಪಿಎಂ ಗಿಂತ ಕಡಿಮೆಯಾದ ನಿಧಾನವಾದ ಪಲ್ಸ್ ದರ ಇದ್ದರೆ.

· ಪಲ್ಸ್ ಬದಲಾವಣೆ ಜೊತೆಗೆ ಎದೆ ನೋವು, ಉಸಿರಾಟದ ತೊಂದರೆ, ಮೂರ್ಛೆ, ಅಥವಾ ತಲೆತಿರುಗುವಿಕೆ ಇದ್ದರೆ.

· ಅನಿಯಮಿತ, ಢವಗುಡುವ ಅಥವಾ ಅನಿಯಮಿತ ಹೃದಯ ಬಡಿತಗಳು ಇದ್ದರೆ.

· ದೈಹಿಕ ಚಟುವಟಿಕೆ ಅಥವಾ ತೀವ್ರ ಉತ್ಸಾಹದಂತಹ ಸಂದರ್ಭ ಇಲ್ಲದೆಯೂ ಹಠಾತ್ ಆಗಿ ಹಾರ್ಟ್ ರೇಟ್ ಬದಲಾವಣೆ ಉಂಟಾದರೆ.

ನೀವು ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ ಅಥವಾ ಹೃದಯ ರೋಗದ ಕುಟುಂಬ ಇತಿಹಾಸದಂತಹ ಅಪಾಯಕರ ಅಂಶಗಳನ್ನು ಹೊಂದಿದ್ದರೆ, ನಿಯಮಿತ ಹೃದಯ ಆರೋಗ್ಯ ತಪಾಸಣೆಗೆ ವೈದ್ಯರನ್ನು ಭೇಟಿಯಾಗಬೇಕು. ಅವರು ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಅಥವಾ ಪೋರ್ಟೆಬಲ್ ಮಾನಿಟರ್ ಧರಿಸಲು ಶಿಫಾರಸು ಮಾಡಬಹುದು.

ಕೊನೆಯ ಮಾತು

ವಯಸ್ಸಿನ ಆಧಾರದ ಹಾರ್ಟ್ ರೇಟ್ ನಿಮ್ಮ ಹೃದಯದ ಸ್ಥಿತಿಯನ್ನು ತಿಳಿಯಲು ಸರಳವಾದ ಮಾರ್ಗವಾಗಿದೆ. ನಿಮ್ಮ ಹೃದಯ ಬಡಿತದಲ್ಲಿ ಯಾವುದೇ ಬದಲಾವಣೆಯನ್ನು ಗುರುತಿಸಲು ಮತ್ತು ಸಮಸ್ಯೆಗಳನ್ನು ತಿಳಿಯಲು ಆರೋಗ್ಯ ಸೇವಾ ಪೂರೈಕೆದಾರರಿಗೆ ಇದರಿಂದ ಸುಲಭವಾಗುತ್ತದೆ. ಟಾರ್ಗೆಟ್ ಹಾರ್ಟ್ ರೇಟ್ ಅನ್ನು ವಿಶೇಷವಾಗಿ ತಿಳಿದುಕೊಂಡರೆ, ನೀವು ವ್ಯಾಯಾಮವನ್ನು ಹುಷಾರಾಗಿ ಮಾಡಬಹುದು. ಆದ್ದರಿಂದ, ನಿಮ್ಮ ವೈದ್ಯರು ನಿಮ್ಮ ಹೃದಯ ಸ್ಥಿತಿಯನ್ನು ತಿಳಿಯಲು ಲಿಪಿಡ್ ಪ್ರೊಫೈಲ್‌ ನಂತಹ ಲ್ಯಾಬ್ ಪರೀಕ್ಷೆಗಳನ್ನು ಶಿಫಾರಸು ಮಾಡಬಹುದು ಮತ್ತು ಸರಾಸರಿ ಹೃದಯ ಬಡಿತ ತಿಳಿದು ಆಗತ್ಯ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಆದ್ದರಿಂದ, ಯಾವುದೇ ಲ್ಯಾಬ್ ಪರೀಕ್ಷೆಗೆ ಮೆಟ್ರೋಪೊಲಿಸ್‌ ಅನ್ನು ಸಂಪರ್ಕಿಸಿ ಮತ್ತು ನಿಮ್ಮ ಸ್ಲಾಟ್ ಬುಕ್ ಮಾಡಿ. ಈ ಲ್ಯಾಬ್ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಮನೆಯಿಂದಲೇ ರಕ್ತ ಸಂಗ್ರಹ ಮಾಡುವ ಸೇವೆಗಳನ್ನು ಸಹ ನೀಡುತ್ತದೆ, ಈ ಮೂಲಕ ಸುಲಭವಾಗಿ ಪೆಥಾಲಜಿ ಸೇವೆಗಳನ್ನು ಒದಗಿಸುತ್ತದೆ!

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

120 ಹಾರ್ಟ್ ರೇಟ್ ಸಾಮಾನ್ಯವೇ?

ಸಾಮಾನ್ಯವಾಗಿ, ಇಲ್ಲ. ಹೆಚ್ಚಿನ ವಯಸ್ಕರಿಗೆ, 120 ಬಿಪಿಎಂ (ಬೀಟ್ಸ್ ಪರ್ ಮಿನಿಟ್) ರೆಸ್ಟಿಂಗ್ ಹಾರ್ಟ್ ರೇಟ್ ಅನ್ನು ಟಾಕಿಕಾರ್ಡಿಯಾ ಎಂದು ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ವೈದ್ಯಕೀಯ ಮೌಲ್ಯಮಾಪನ ಅಗತ್ಯವಾಗಿರುತ್ತದೆ. ಆದರೆ, ಮಧ್ಯಮ ತೀವ್ರತೆಯ ವ್ಯಾಯಾಮ ಮಾಡುವ ಸಮಯದಲ್ಲಿ 120 ಬಿಪಿಎಂ ಪಲ್ಸ್ ಸಾಮಾನ್ಯವಾಗಿರುತ್ತದೆ. ಹಾಗಾಗಿ ನಿಮ್ಮ ಸಾಮಾನ್ಯ ರೆಸ್ಟಿಂಗ್ ರೇಟ್ ಮತ್ತು ಮಾಡಬಹುದಾದ ವ್ಯಾಯಾಮದ ಕುರಿತು ತಿಳಿದಿರುವುದು ಮುಖ್ಯ.

80-90 ಸಾಮಾನ್ಯ ಹಾರ್ಟ್ ರೇಟ್ ಆಗಿರುತ್ತದೆಯೇ?

ಹೌದು, 80-90 ಬಿಪಿಎಂ ನಡುವಿನ ರೆಸ್ಟಿಂಗ್ ಹಾರ್ಟ್ ರೇಟ್ ಹೆಚ್ಚಿನ ವಯಸ್ಕರಿಗೆ ಸಾಮಾನ್ಯ ಹಾರ್ಟ್ ರೇಟ್ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ, ಒತ್ತಡ, ಆತಂಕ ಅಥವಾ ಕೆಲವು ಔಷಧಿಗಳಂತಹ ಅಂಶಗಳು ತಾತ್ಕಾಲಿಕವಾಗಿ ನಿಮ್ಮ ಪಲ್ಸ್ ಅನ್ನು ಏರಿಸಬಹುದಾಗಿದೆ. ನಿಮ್ಮ ರೆಸ್ಟಿಂಗ್ ರೇಟ್ ನಿರಂತರವಾಗಿ 90 ಬಿಪಿಎಂ ಗಿಂತ ಹೆಚ್ಚಾದರೆ, ತಕ್ಷಣ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ವಯಸ್ಸಿನ ಆಧಾರದ ಮೇಲೆ ಉತ್ತಮ ಹಾರ್ಟ್ ರೇಟ್ ಯಾವುದು?

ನಾರ್ಮಲ್ ಹಾರ್ಟ್ ರೇಟ್ ವ್ಯಾಪ್ತಿಗಳು ವಯಸ್ಸಿನ ಆಧಾರದ ಮೇಲೆ ಬದಲಾಗುತ್ತವೆ, ಶಿಶುಗಳು ಮತ್ತು ಮಕ್ಕಳು ವಯಸ್ಕರಿಗಿಂತ ವೇಗವಾದ ಹಾರ್ಟ್ ರೇಟ್ ಹೊಂದಿರುತ್ತಾರೆ. ಈ ಕೆಳಗೆ ನಾರ್ಮಲ್ ರೇಂಜ್ ನೀಡಲಾಗಿದೆ:

· ಹೊಸದಾಗಿ ಜನಿಸಿದ ಶಿಶು: 100-205 ಬಿಪಿಎಂ

· ತೊದಲುವ ಮಕ್ಕಳು: 98-140 ಬಿಪಿಎಂ

· 3-5 ವರ್ಷದ ಮಕ್ಕಳು: 80-120 ಬಿಪಿಎಂ

· 6-11 ವರ್ಷದ ಮಕ್ಕಳು: 75-118 ಬಿಪಿಎಂ

· ಹದಿಹರೆಯವರು: 60-100 ಬಿಪಿಎಂ

· ವಯಸ್ಕರು: 60-100 ಬಿಪಿಎಂ

72 ಉತ್ತಮ ಹಾರ್ಟ್ ರೇಟ್ ಆಗಿದೆಯೇ?
ಹೌದು, 72 ಬಿಪಿಎಂ ನ ರೆಸ್ಟಿಂಗ್ ಹಾರ್ಟ್ ರೇಟ್ ಹೆಚ್ಚಿನ ವಯಸ್ಕರಿಗೆ ಸಾಮಾನ್ಯವಾಗಿದೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, 60-70 ಬಿಪಿಎಂ ವ್ಯಾಪ್ತಿಯಲ್ಲಿ ರೆಸ್ಟಿಂಗ್ ಪಲ್ಸ್ ರೇಟ್ ಹೊಂದಿರುವ ಜನರು, ನಿರಂತರವಾಗಿ ಹೆಚ್ಚಿನ ಹಾರ್ಟ್ ರೇಟ್ ಗಳನ್ನು ಹೊಂದಿರುವವರಿಗೆ ಹೋಲಿಸಿದರೆ, ಉತ್ತಮ ಹೃದಯ ಫಿಟ್‌ನೆಸ್ ಮತ್ತು ಕಡಿಮೆ ಹೃದಯ ರೋಗದ ಅಪಾಯವನ್ನು ಹೊಂದಿರುತ್ತಾರೆ.

ಅನಾರೋಗ್ಯಕರ ಹಾರ್ಟ್ ರೇಟ್ ಎಂದರೇನು?

ಅನಾರೋಗ್ಯಕರ ರೆಸ್ಟಿಂಗ್ ಹಾರ್ಟ್ ರೇಟ್ ಸಾಮಾನ್ಯವಾಗಿ ನಿಮ್ಮ ವಯಸ್ಸಿನ ಗುಂಪಿನ ಮಾನದಂಡಗಳಿಂದ ಹೊರಗಿರುತ್ತದೆ. ಅದರಲ್ಲೂ ವಿಶೇಷ ಲಕ್ಷಣಗಳು ಕಾಣಿಸಿಕೊಂಡರೆ. ವಯಸ್ಕರಿಗೆ, ಇದು ಸಾಮಾನ್ಯವಾಗಿ ವಿಶ್ರಾಂತಿ ಸ್ಥಿತಿಯಲ್ಲಿ 50 ಬಿಪಿಎಂ ಗಿಂತ ಕಡಿಮೆ ಅಥವಾ 120 ಬಿಪಿಎಂ ಗಿಂತ ಹೆಚ್ಚು ಹಾರ್ಟ್ ರೇಟ್ ಇರುವುದನ್ನು ಅನಾರೋಗ್ಯಕರ ಎಂದು ಭಾವಿಸಲಾಗುತ್ತದೆ. ಈ ಅನಾರೋಗ್ಯಕರ ಹಾರ್ಟ್ ರೇಟ್ ಹೃದಯ ಸಮಸ್ಯೆಗಳನ್ನು ಪ್ರತಿಬಿಂಬಿಸಬಹುದು, ಆದ್ದರಿಂದ ನಿಮಗೆ ಈ ಕುರಿತು ಚಿಂತೆ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಮುಖ್ಯ.

150 ಬಿಪಿಎಂ ಕೆಟ್ಟದ್ದೇ?

ತೀವ್ರವಾದ ವ್ಯಾಯಾಮದ ಸಮಯದಲ್ಲಿ 150 ಬಿಪಿಎಂ ನ ಹಾರ್ಟ್ ರೇಟ್ ಅನೇಕ ವಯಸ್ಕರಿಗೆ ಸಾಮಾನ್ಯವಾಗಿರುತ್ತದೆ. ಆದರೆ, 150 ಬಿಪಿಎಂ ನಷ್ಟು ರೆಸ್ಟಿಂಗ್ ಪಲ್ಸ್ (ಟಾಕಿಕಾರ್ಡಿಯಾ) ಅಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ಎದೆ ನೋವು ಅಥವಾ ತಲೆತಿರುಗುವಿಕೆಯಂತಹ ಲಕ್ಷಣಗಳಿದ್ದರೆ ವೈದ್ಯಕೀಯವಾಗಿ ಮೌಲ್ಯಮಾಪನ ಮಾಡಬೇಕು.

200 ಬಿಪಿಎಂ ಹಾರ್ಟ್ ರೇಟ್ ಅಪಾಯಕಾರಿಯೇ?

ಹೆಚ್ಚಿನ ಸಂದರ್ಭಗಳಲ್ಲಿ, ಹೌದು. 200 ಬಿಪಿಎಂ ನಷ್ಟು ನಿರಂತರ ಹಾರ್ಟ್ ರೇಟ್, ಅದೂ ವಿಶೇಷವಾಗಿ ವಿಶ್ರಾಂತಿ ಸ್ಥಿತಿಯಲ್ಲಿ ಇದ್ದರೆ ಅಪಾಯಕಾರಿಯಾಗಿದೆ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸುವ ಅಗತ್ಯ ಇರುತ್ತದೆ ಈ ಅತಿಯಾದ ವೇಗವಾದ ಪಲ್ಸ್ ರೇಟ್ ನಿಂದ ತಲೆತಿರುಗುವಿಕೆ, ಎದೆಯ ನೋವು, ಮೂರ್ಛೆ, ಮತ್ತು ತೀವ್ರ ಸಂದರ್ಭಗಳಲ್ಲಿ, ಹೃದಯಾಘಾತ ಅಥವಾ ಸ್ಟ್ರೋಕ್‌ಗೆ ಕಾರಣವಾಗಬಹುದು. ತೀವ್ರವಾದ ವ್ಯಾಯಾಮದ ಸಮಯದಲ್ಲಿಯೂ, 200 ಬಿಪಿಎಂ ಗಿಂತ ಹೆಚ್ಚಿನ ಹಾರ್ಟ್ ಇದ್ದರೆ ಅದು ಸಾಮಾನ್ಯ ಮಟ್ಟ ಅಲ್ಲ.

ಎಷ್ಟು ಹಾರ್ಟ್ ರೇಟ್ ಇದ್ದರೆ ತುಂಬಾ ಜಾಸ್ತಿ ಎಂದು ಪರಿಗಣಿಸಬಹುದು?

ಸಾಮಾನ್ಯವಾಗಿ, ವಯಸ್ಕರಿಗೆ ವಿಶ್ರಾಂತಿ ಸ್ಥಿತಿಯಲ್ಲಿ ನಿರಂತರವಾಗಿ 120 ಬಿಪಿಎಂ ಗಿಂತ ಜಾಸ್ತಿ ಹಾರ್ಟ್ ರೇಟ್ ಇದ್ದರೆ ಅದನ್ನು ತುಂಬಾ ಜಾಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಅತಿಯಾದ

Leave a reply

Your email address will not be published. Required fields are marked *

We value your feedback. Share your thoughts, questions, or suggestions and our team will review them shortly.

  • Stay respectful and constructive.
  • Avoid posting personal or sensitive information.
  • Keep your message clear and concise.

Thank you for being a part of our community and helping us improve.

TruHealth Packages

Choose from our wide range of TruHealth Packages and Health Checkups

Proceed

To book your home visit call us at 080-4891-1400

Book a Home Visit Now!

080-4891-1400