Need help? Talk to our expert.
WhatsApp


ಎಂಪಿವಿ ರಕ್ತ ಪರೀಕ್ಷೆ: ನಾರ್ಮಲ್ ರೇಂಜ್ ಮತ್ತು ಫಲಿತಾಂಶಗಳ ಕುರಿತು ಅರ್ಥ ವಿವರಣೆ

Metropolis Healthcare
Last Updated February 13, 2026
Kannada
ಎಂಪಿವಿ ರಕ್ತ ಪರೀಕ್ಷೆ: ನಾರ್ಮಲ್ ರೇಂಜ್ ಮತ್ತು ಫಲಿತಾಂಶಗಳ ಕುರಿತು ಅರ್ಥ ವಿವರಣೆ

ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ರಕ್ತದಲ್ಲಿರುವ ಚಿಕ್ಕ ಶಕ್ತಿಕೇಂದ್ರಗಳ ಕುರಿತು ಯಾವತ್ತಾದರೂ ಯೋಚಿಸಿದ್ದೀರಾ? ಬಹುಶಃ ಇಲ್ಲ. ಹಾಗಿದ್ದರೆ ನೀವು ಎಂಪಿವಿ ಜಗತ್ತನ್ನು ಅರಿಯಬೇಕು.

ಎಂಪಿವಿ ಎಂದರೆ ಮೀನ್ ಪ್ಲೇಟ್‌ಲೆಟ್ ವ್ಯಾಲ್ಯೂಮ್ ಎಂದರ್ಥ. ನಿಮ್ಮ ಪ್ಲೇಟ್‌ಲೆಟ್‌ಗಳ ಗಾತ್ರ ಮತ್ತು ನಿಮ್ಮ ಆರೋಗ್ಯದ ಮೇಲೆ ಅವುಗಳು ಬೀರುವ ಪರಿಣಾಮವನ್ನು ತಿಳಿಯಲು ಈ ಎಂಪಿವಿ ಸಹಾಯ ಮಾಡುತ್ತದೆ. ಪ್ಲೇಟ್‌ಲೆಟ್‌ಗಳನ್ನು ನಿಮ್ಮ ರಕ್ತಪ್ರವಾಹದಲ್ಲಿ ಗಸ್ತು ತಿರುಗುವ ಸೂಪರ್‌ಹೀರೋಗಳಂತೆ ಊಹಿಸಿಕೊಳ್ಳ್ಳುವುದಾದರೆ ಎಂಪಿವಿ ರಕ್ತ ಪರೀಕ್ಷೆಯು ಅವುಗಳ ಗಾತ್ರವನ್ನು ಬಹಿರಂಗಪಡಿಸುವ ಒಂದು ರಹಸ್ಯ ಕೋಡ್ ಆಗಿದೆ.

ಈ ಲೇಖನವು ಎಂಪಿವಿಯ ಮಹತ್ವವನ್ನು ಅರ್ಥಮಾಡಿಸಲಿದೆ, ಅದರ ಪಾತ್ರವನ್ನು ತಿಳಿಸಲಿದೆ ಮತ್ತು ಅದು ಹೆಲ್ತ್ ಕಂಪಾಸ್ ಥರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಹೇಳಲಿದೆ. ಬನ್ನಿ, ಮುಂದೆ ಓದೋಣ!

ಎಂಪಿವಿ ರಕ್ತ ಪರೀಕ್ಷೆ ಎಂದರೇನು?

ಎಂಪಿವಿ ರಕ್ತ ಪರೀಕ್ಷೆ ಅಥವಾ ಮೀನ್ ಪ್ಲೇಟ್‌ಲೆಟ್ ವಾಲ್ಯೂಮ್ ಪರೀಕ್ಷೆ ಎಂದರೆ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳ ಸರಾಸರಿ ಗಾತ್ರವನ್ನು ಅಳೆಯುವುದು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತನಾಳಗಳ ಸಮಗ್ರತೆಯನ್ನು ಕಾಪಾಡುವಲ್ಲಿ ಪ್ಲೇಟ್‌ಲೆಟ್‌ಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಈ ಪರೀಕ್ಷೆಯು ಸಾಮಾನ್ಯವಾಗಿ ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಪರೀಕ್ಷೆಯ ಭಾಗವಾಗಿ ಮಾಡಲಾಗುತ್ತದೆ ಮತ್ತು ಈ ಪರೀಕ್ಷೆಯು ವಿವಿಧ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ಗರ್ಭಿಣಿಯರಲ್ಲದ ವಯಸ್ಕರಿಗೆ ಎಂಪಿವಿ ನಾರ್ಮಲ್ ರೇಂಜ್ 7 ಫೆಮ್ಟೊಲೀಟರ್‌ಗಳಿಂದ (ಎಫ್ಎಲ್) 11.5 ಫೆಮ್ಟೊಲೀಟರ್‌ ವರೆಗೆ ಇರುತ್ತದೆ.

ಎಂಪಿವಿ ಪ್ರಮಾಣ ಹೆಚ್ಚಿದ್ದರೆ ಯುವ, ದೊಡ್ಡ ಗಾತ್ರದ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂಬುದನ್ನು ಸೂಚಿಸಬಹುದು, ಇದು ಬಹುಶಃ ಮೂಳೆಮಜ್ಜೆಯಿಂದ ತ್ವರಿತ ಉತ್ಪಾದನೆ ಮತ್ತು ಬಿಡುಗಡೆಯಿಂದ ಆಗಿರಬಹುದು. ಇದಕ್ಕೆ ವಿರುದ್ಧವಾಗಿ, ಎಂಪಿವಿ ಪ್ರಮಾಣ ಕಡಿಮೆ ಇದ್ದರೆ ಸಣ್ಣ ಗಾತ್ರದ ಪ್ಲೇಟ್‌ಲೆಟ್‌ಗಳಿದೆ ಎಂದರ್ಥ. ಈ ಪರೀಕ್ಷೆಯು ಒಟ್ಟಾರೆ ಪ್ಲೇಟ್‌ಲೆಟ್ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ಉಪಯುಕ್ತವಾಗಿದೆ ಮತ್ತು ಕೆಲವು ವೈದ್ಯಕೀಯ ಸಮಸ್ಯೆಗಳ ಕುರಿತು ಒಳನೋಟವನ್ನು ನೀಡುತ್ತದೆ. ಇದನ್ನು ರಕ್ತದ ಮಾದರಿಯನ್ನು ಬಳಸಿಕೊಂಡು ನಡೆಸಲಾಗುತ್ತದೆ ಮತ್ತು ಫಲಿತಾಂಶಗಳು ವೈದ್ಯರಿಗೆ ರೋಗನಿರ್ಣಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ.

ಎಂಪಿವಿ ರಕ್ತ ಪರೀಕ್ಷೆಯನ್ನು ಯಾವಾಗ ಮಾಡಲಾಗುತ್ತದೆ?

ಎಂಪಿವಿ ರಕ್ತ ಪರೀಕ್ಷೆಯನ್ನು ಸಾಮಾನ್ಯವಾಗಿ ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಭಾಗವಾಗಿ ಮಾಡಲಾಗುತ್ತದೆ. ಈ ಪರೀಕ್ಷೆಯು ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳ ಸರಾಸರಿ ಗಾತ್ರವನ್ನು ಮೌಲ್ಯಮಾಪನ ಮಾಡುತ್ತದೆ. ವೈದ್ಯರು ಈ ಪರೀಕ್ಷೆಯನ್ನು ವಿವಿಧ ಸಮಸ್ಯೆಗಳನ್ನು ತಪಾಸಣೆ ಮಾಡುವ ಸಲುವಾಗಿ ಮಾಡಿಸಬಹುದು.

ಎಂಪಿವಿ ಹೆಚ್ಚಿದ್ದರೆ ದೊಡ್ಡ ಗಾತ್ರದ, ಯುವ ಪ್ಲೇಟ್‌ಲೆಟ್‌ಗಳ ಉತ್ಪಾದನೆ ಹೆಚ್ಚಾಗಿರುವುದು ಎಂದರ್ಥ, ಇದು ಸೋಂಕುಗಳು ಅಥವಾ ಉರಿಯೂತದಂತಹ ಕೆಲವು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದಾಗಿದೆ. ಇದಕ್ಕೆ ವಿರುದ್ಧವಾಗಿ, ಎಂಪಿವಿ ಕಡಿಮೆ ಇದ್ದರೆ ಸಣ್ಣ ಗಾತ್ರದ ಪ್ಲೇಟ್‌ಲೆಟ್‌ಗಳಿರುವುದು ಎಂದರ್ಥ, ಇದು ದೀರ್ಘಕಾಲಿಕ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿರಬಹುದು.

ವೈದ್ಯರು ಈ ಫಲಿತಾಂಶಗಳನ್ನು ಇತರ ಪರೀಕ್ಷೆಗಳ ಜೊತೆಗೆ ರಕ್ತಸ್ರಾವದ ಕಾಯಿಲೆಗಳು, ಮೂಳೆಮಜ್ಜೆಯ ಕಾಯಿಲೆಗಳು ಮತ್ತು ಉರಿಯೂತದ ಕಾಯಿಲೆಗಳನ್ನು ರೋಗನಿರ್ಣಯ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಬಳಸುತ್ತಾರೆ. ಎಂಪಿವಿ ಪರೀಕ್ಷೆಯು ಪ್ಲೇಟ್‌ಲೆಟ್ ಆರೋಗ್ಯದ ಬಗ್ಗೆ ಮೌಲ್ಯಯುತ ಒಳನೋಟವನ್ನು ನೀಡುತ್ತದೆ ಮತ್ತು ರೋಗಿಯ ಒಟ್ಟಾರೆ ಆರೋಗ್ಯದ ಮೌಲ್ಯಮಾಪನಕ್ಕೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ಎಂಪಿವಿ ಸಾಮಾನ್ಯ ಶ್ರೇಣಿಯು ಮಹಿಳೆಯರಿಗೆ ಮತ್ತು ಪುರುಷರಿಗೆ 7.4 ರಿಂದ 10.4 ಫೆಮ್ಟೊಲೀಟರ್‌ಗಳ (ಎಫ್ಎಲ್) ನಡುವೆ ಇರುತ್ತದೆ.

ಎಂಪಿವಿ ರಕ್ತ ಪರೀಕ್ಷೆಯನ್ನು ಯಾರು ನಡೆಸುತ್ತಾರೆ?

ಎಂಪಿವಿ ರಕ್ತ ಪರೀಕ್ಷೆಯನ್ನು ಸಾಮಾನ್ಯವಾಗಿ ವೈದ್ಯರು ಅಥವಾ ದಾದಿಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ನಡೆಸುತ್ತಾರೆ. ಈ ಪರೀಕ್ಷೆಯು ರಕ್ತವನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ ಮತ್ತು ಫಲಿತಾಂಶಗಳು ಪ್ಲೇಟ್‌ಲೆಟ್ ಆರೋಗ್ಯವನ್ನು ಮೌಲ್ಯಮಾಪನ ಮಾಡಲು, ಎಂಪಿವಿ ಸಾಮಾನ್ಯ ಶ್ರೇಣಿಯನ್ನು ತಿಳಿಯಲು ಮತ್ತು ವಿವಿಧ ಸಮಸ್ಯೆಗಳ ರೋಗನಿರ್ಣಯ ಮಾಡಲು ಸಹಾಯ ಮಾಡುತ್ತವೆ. ವೃತ್ತಿಪರರು ರಕ್ತದ ಮಾದರಿಯನ್ನು ಸರಿಯಾಗಿ ಸಂಗ್ರಹಿಸಿ ವಿಶ್ಲೇಷಿಸುತ್ತಾರೆ.

ಎಂಪಿವಿ ರಕ್ತ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು?

ಎಂಪಿವಿ (ಮೀನ್ ಪ್ಲೇಟ್ ಲೆಟ್ ವ್ಯಾಲ್ಯೂಮ್) ರಕ್ತ ಪರೀಕ್ಷೆಗೆ ಸಾಮಾನ್ಯವಾಗಿ ಯಾವುದೇ ವಿಶೇಷ ತಯಾರಿಯ ಅಗತ್ಯವಿರುವುದಿಲ್ಲ. ಸಾಮಾನ್ಯವಾಗಿ ಉಪವಾಸ ಇರಬೇಕಾದ ಅಗತ್ಯವಿರುವುದಿಲ್ಲ ಅಥವಾ ಇತರ ಸಿದ್ಧತೆ ಬೇಕಾಗಿರುವುದಿಲ್ಲ. ಆದರೆ, ರಕ್ತವನ್ನು ತೆಗೆಯುವಾಗ ಪ್ರಮಾಣಿತ ಫ್ಲೆಬೊಟೊಮಿ ವಿಧಾನಗಳನ್ನು ಅನುಸರಿಸುವುದು ಮುಖ್ಯ.

ಒಂದೇ ಸಮಯದಲ್ಲಿ ಇತರ ರಕ್ತ ಪರೀಕ್ಷೆಗಳನ್ನು ಮಾಡುತ್ತಿದ್ದರೆ, ಆ ಪರೀಕ್ಷೆಗಳಿಗೆ ಅಗತ್ಯವಿರುವ ಯಾವುದೇ ತಯಾರಿಗಳನ್ನು ಅನುಸರಿಸಬೇಕು. ನಿಮ್ಮ ಆರೋಗ್ಯ ಮತ್ತು ನಡೆಸಲಾಗುವ ನಿರ್ದಿಷ್ಟ ಪರೀಕ್ಷೆಗಳ ಆಧಾರದ ಮೇಲೆ ವೈಯಕ್ತಿಕ ಸೂಚನೆಗಳಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಎಂಪಿವಿ ರಕ್ತ ಪರೀಕ್ಷೆಯ ಸಮಯದಲ್ಲಿ ಏನನ್ನು ನಿರೀಕ್ಷಿಸಬಹುದು?

ಎಂಪಿವಿ ರಕ್ತ ಪರೀಕ್ಷೆಯ ಸಮಯದಲ್ಲಿ, ರಕ್ತ ತೆಗೆಯುವ ಸಾಮಾನ್ಯ ವಿಧಾನವನ್ನು ನಿರೀಕ್ಷಿಸಬಹುದು. ವೈದ್ಯಕೀಯ ವೃತ್ತಿಪರರು ನಿಮ್ಮ ತೋಳಿನಲ್ಲಿ ಚುಚ್ಚುವ ಸ್ಥಳವನ್ನು ಆಲ್ಕೋಹಾಲ್ ಸ್ವ್ಯಾಬ್‌ನಿಂದ ಸ್ವಚ್ಛಗೊಳಿಸುತ್ತಾರೆ, ಟೂರ್ನಿಕೆಟ್‌ ಅನ್ನು ಬಳಸಿ ರಕ್ತದ ಮಾದರಿಯನ್ನು ಸಂಗ್ರಹಿಸಲು ಸೂಜಿಯನ್ನು ಚುಚ್ಚುತ್ತಾರೆ. ಈ ಪ್ರಕ್ರಿಯೆ ತ್ವರಿತವಾಗಿರುತ್ತದೆ ಮತ್ತು ಸ್ವಲ್ಪ ಅಸೌಕರ್ಯ ಅಥವಾ ಕ್ಷಣಿಕ ಒತ್ತಡವನ್ನು ಉಂಟುಮಾಡಬಹುದು.

ಪರೀಕ್ಷೆಯ ನಂತರ, ಸಂಗ್ರಹಿಸಿದ ಮಾದರಿಯನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಫಲಿತಾಂಶಗಳು ನಿಮ್ಮ ಪ್ಲೇಟ್‌ಲೆಟ್‌ಗಳ ಸರಾಸರಿ ಗಾತ್ರವನ್ನು ಸೂಚಿಸುತ್ತವೆ, ಇದು ನಿಮ್ಮ ಪ್ಲೇಟ್‌ಲೆಟ್ ಆರೋಗ್ಯ ಮತ್ತು ಸಂಭಾವ್ಯ ಆರೋಗ್ಯ ಸಮಸ್ಯೆಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ನೀಡುತ್ತದೆ. ಯಾವುದೇ ನಿರ್ದಿಷ್ಟ ಸೂಚನೆಗಳು ಅಥವಾ ಆತಂಕಗಳಿದ್ದಾಗ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಎಂಪಿವಿ ರಕ್ತ ಪರೀಕ್ಷೆಯ ಅಪಾಯಗಳೇನು?

ಎಂಪಿವಿ ರಕ್ತ ಪರೀಕ್ಷೆಯು ಸಾಮಾನ್ಯವಾಗಿ ಕಡಿಮೆ ಅಪಾಯದ್ದಾಗಿದೆ. ಸೂಜಿಯ ಚುಚ್ಚುವಿಕೆಯ ಸ್ಥಳದಲ್ಲಿ ಸ್ವಲ್ಪ ನೋವು ಅಥವಾ ಗಾಯವಾಗುವ ಸಾಧ್ಯತೆ ಇದೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಸಣ್ಣದಿರುತ್ತವೆ, ತಾತ್ಕಾಲಿಕವಾಗಿರುತ್ತವೆ ಮತ್ತು ಕೆಲವು ದಿನಗಳಲ್ಲಿ ಗುಣವಾಗುತ್ತವೆ. ಈ ಸಾಮಾನ್ಯ ರೋಗನಿರ್ಣಯ ವಿಧಾನದಲ್ಲಿ ಬಹಳ ಕನಿಷ್ಠ ಅಪಾಯವಿದೆ.

ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶಗಳು ಏನನ್ನು ಸೂಚಿಸುತ್ತವೆ?

ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶಗಳು ಪ್ಲೇಟ್‌ಲೆಟ್‌ಗಳ ಸರಾಸರಿ ಗಾತ್ರವನ್ನು ಸೂಚಿಸುತ್ತವೆ. ಎಂಪಿವಿ ಹೆಚ್ಚಿದೆ ಎಂದರೆ ಯುವ, ದೊಡ್ಡ ಗಾತ್ರದ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಏರಿಕೆ ಇದೆ ಎಂದರ್ಥ, ಇದು ಮೂಳೆಮಜ್ಜೆಯ ತ್ವರಿತ ಚಟುವಟಿಕೆಯಿಂದ ಆಗಿರಬಹುದು. ಇದಕ್ಕೆ ವಿರುದ್ಧವಾಗಿ, ಎಂಪಿವಿ ಕಡಿಮೆ ಇದೆ ಎಂದರೆ ಹಳೆಯ, ಸಣ್ಣ ಗಾತ್ರದ ಪ್ಲೇಟ್‌ಲೆಟ್‌ಗಳಿದೆ ಎಂದರ್ಥ, ಇದು ಮೂಳೆಮಜ್ಜೆಯ ಚಟುವಟಿಕೆ ಕಡಿಮೆ ಆಗಿರುವುದನ್ನು ಸೂಚಿಸಬಹುದು.

ನಾರ್ಮಲ್ ಎಂಪಿವಿ ರಕ್ತ ಪರೀಕ್ಷೆ ಫಲಿತಾಂಶ ಎಂದರೇನು?

ನಾರ್ಮಲ್ ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶವು ಸಾಮಾನ್ಯವಾಗಿ 7 ರಿಂದ 12 ಫೆಮ್ಟೊಲೀಟರ್‌ಗಳ ಶ್ರೇಣಿಯೊಳಗೆ ಬರುತ್ತದೆ. ಈ ಶ್ರೇಣಿಯು ಪ್ರಯೋಗಾಲಯಗಳ ನಡುವೆ ಸ್ವಲ್ಪ ಬದಲಾಗಬಹುದು, ಆದರೆ ಸಾಮಾನ್ಯವಾಗಿ ಈ ಶ್ರೇಣಿಯೊಳಗಿನ ಎಂಪಿವಿ ಅಳತೆಯನ್ನು ಆರೋಗ್ಯವಂತ ವ್ಯಕ್ತಿಗಳಲ್ಲಿ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.

ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶದಲ್ಲಿ ಎಂಪಿವಿ ಪ್ರಮಾಣ ಹೆಚ್ಚಾಗಿದ್ದರೆ ಅದರರ್ಥ ಏನು?

ರಕ್ತ ಪರೀಕ್ಷೆಯಲ್ಲಿ ಎಂಪಿವಿ ಹೆಚ್ಚಿದೆ ಎಂದು ಬಂದರೆ, ಈ ಫಲಿತಾಂಶವು ಈ ಕೆಳಗಿನವುಗಳನ್ನು ಸೂಚಿಸುತ್ತವೆ:

• ಎಂಪಿವಿ ಹೆಚ್ಚಿದೆ ಎಂದರೆ ನಿಮ್ಮ ರಕ್ತದಲ್ಲಿ ದೊಡ್ಡ, ಯುವ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದರ್ಥ. ಇದು ಉರಿಯೂತ ಅಥವಾ ಮೂಳೆಮಜ್ಜೆಯಿಂದ ತ್ವರಿತ ಪ್ಲೇಟ್‌ಲೆಟ್ ಬಿಡುಗಡೆಯಂತಹ ಕಾರಣಗಳಿಗೆ ಪ್ರತಿಕ್ರಿಯೆಯಾಗಿ ಹೆಚ್ಚಿನ ಪ್ಲೇಟ್‌ಲೆಟ್ ಉತ್ಪಾದನೆಯನ್ನು ಸೂಚಿಸಬಹುದು.

• ಎಂಪಿವಿ ಹೆಚ್ಚಿದ ಎಂದರೆ ಹೃದಯರಕ್ತನಾಳದ ಕಾಯಿಲೆಗಳಂತಹ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಮತ್ತು ಕಾರಣವನ್ನು ಕಂಡುಹಿಡಿಯಲು ಮತ್ತು ಸೂಕ್ತ ಚಿಕಿತ್ಸೆಗಾಗಿ ಮತ್ತಷ್ಟು ವೈದ್ಯಕೀಯ ಮೌಲ್ಯಮಾಪನದ ಅಗತ್ಯವಿರಬಹುದು.

• ಉರಿಯೂತ, ಕೆಲವು ಔಷಧಿಗಳು, ಮತ್ತು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸ್ಥಿತಿಗಳು ಎಂಪಿವಿ ಹೆಚ್ಚಾಗಲು ಕಾರಣವಾಗಬಹುದು.

• ಕ್ಯಾನ್ಸರ್, ಮಧುಮೇಹ, ಹೃದಯರಕ್ತನಾಳದ ಕಾಯಿಲೆ, ಪ್ರೀಕ್ಲಾಂಪ್ಸಿಯಾ, ಕ್ರೋನ್ಸ್ ಕಾಯಿಲೆ, ಹೈಪರ್‌ಥೈರಾಯಿಡಿಸಂ, ಕ್ರೋನಿಕ್ ಮೈಲೋಜೆನಸ್ ಲಿಂಕೇಮಿಯಾ (ಸಿಎಂಎಲ್) ಸ್ಥಿತಿಗಳನ್ನು ಎಂಪಿವಿ ರಕ್ತ ಪರೀಕ್ಷೆಯು ತೋರಿಸಿಕೊಡಬಹುದು. ಎಂಪಿವಿ ಹೈ ಇದ್ದರೆ ಅಸಹಜ ತೂಕ ನಷ್ಟ, ಆಯಾಸ ಮತ್ತು ಅತಿಯಾದ ರಕ್ತಸ್ರಾವ ಅಥವಾ ಗಾಯಗಳು ಇತ್ಯಾದಿ ಲಕ್ಷಣಗಳಿಗೆ ಸಂಬಂಧಿಸಿರಬಹುದು.

ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶಗಳು ಕಡಿಮೆ ಇದ್ದರೆ ಅದರರ್ಥ ಏನು?

ನಿಮ್ಮ ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶಗಳು ಕಡಿಮೆಯಾಗಿದ್ದರೆ, ಅದು ನಿಮ್ಮ ಪ್ಲೇಟ್‌ಲೆಟ್‌ಗಳು ಸರಾಸರಿಗಿಂತ ಸಣ್ಣದಾಗಿವೆ ಎಂದು ಸೂಚಿಸುತ್ತದೆ. ಸಣ್ಣ ಪ್ಲೇಟ್‌ಲೆಟ್‌ಗಳು ಹಳೆಯವುಗಳಾಗಿರುತ್ತವೆ, ಇದು ಮೂಳೆಮಜ್ಜೆಯ ಸಮಸ್ಯೆಯನ್ನು ಸೂಚಿಸಬಹುದು, ಇದು ಪ್ಲೇಟ್‌ಲೆಟ್ ಉತ್ಪಾದನೆಯನ್ನು ನಿಧಾನಗೊಳಿಸಬಹುದು ಅಥವಾ ಕಡಿಮೆ ಮಾಡಬಹುದು.

ಕಡಿಮೆ ಎಂಪಿವಿ ಎಂದರೆ ಅಪ್ಲಾಸ್ಟಿಕ್ ಅನೀಮಿಯಾ ಅಥವಾ ಇತರ ಮೂಳೆಮಜ್ಜೆಯ ಕಾಯಿಲೆಗಳಂತಹ ಸ್ಥಿತಿಗಳಿಗೆ ಸಂಬಂಧಿಸಿರಬಹುದು. ಕಾರಣವನ್ನು ಕಂಡುಹಿಡಿಯಲು ಮತ್ತು ಸೂಕ್ತ ಚಿಕಿತ್ಸೆಗಾಗಿ ಮತ್ತಷ್ಟು ವೈದ್ಯಕೀಯ ಮೌಲ್ಯಮಾಪನ ಅಗತ್ಯವಾಗಿದೆ. ಕಡಿಮೆ ಪ್ಲೇಟ್‌ಲೆಟ್ ಎಣಿಕೆಯ ಜೊತೆಗೆ ಕಡಿಮೆ ಎಂಪಿವಿ ಇದ್ದರೆ, ಇದು ಪ್ಲೇಟ್‌ಲೆಟ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮೂಳೆಮಜ್ಜೆಯ ಕಾಯಿಲೆಗಳನ್ನು ಸೂಚಿಸಬಹುದು.

ಎಂಪಿವಿ ರಕ್ತ ಪರೀಕ್ಷೆಯ ಫಲಿತಾಂಶಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರಬಹುದು?

ಎಂಪಿವಿ (ಮೀನ್ ಪ್ಲೇಟ್ ಲೆಟ್ ವ್ಯಾಲ್ಯೂಮ್) ರಕ್ತ ಪರೀಕ್ಷೆಯ ಫಲಿತಾಂಶಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರಬಹುದು. ಆ ಅಂಶಗಳು ಈ ಕೆಳಗಿನಂತಿವೆ:

1. ವಯಸ್ಸು: ಎಂಪಿವಿ ಮಟ್ಟಗಳು ವಯಸ್ಸಿನೊಂದಿಗೆ ಬದಲಾಗಬಹುದು, ಸಾಮಾನ್ಯವಾಗಿ ನವಜಾತ ಶಿಶುಗಳಲ್ಲಿ ಹೆಚ್ಚಾಗಿರುತ್ತವೆ ಮತ್ತು ವಯಸ್ಕರಲ್ಲಿ ಕ್ರಮೇಣ ಕಡಿಮೆಯಾಗುತ್ತವೆ.

2. ಗರ್ಭಾವಸ್ಥೆ: ರಕ್ತದ ಪರಿಮಾಣ ಮತ್ತು ಪ್ಲೇಟ್‌ಲೆಟ್ ನಲ್ಲಿನ ಬದಲಾವಣೆಗಳಿಂದಾಗಿ ಗರ್ಭಾವಸ್ಥೆಯಲ್ಲಿ ಎಂಪಿವಿ ಏರಿಕೆ ಹೊಂದಲು ಕಾರಣವಾಗಬಹುದು.

3. ವೈದ್ಯಕೀಯ ಸಮಸ್ಯೆಗಳು: ಹೃದಯರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್‌ಗಳು ಮತ್ತು ಅನೀಮಿಯಾದಂತಹ ಕೆಲವು ಸ್ಥಿತಿಗಳು ಎಂಪಿವಿ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು.

4. ಔಷಧಿಗಳು: ಆಸ್ಪಿರಿನ್ ಅಥವಾ ಕೀಮೋಥೆರಪಿ ಔಷಧಿಗಳಂತಹ ಕೆಲವು ಔಷಧಿಗಳು ಪ್ಲೇಟ್‌ಲೆಟ್ ಗಾತ್ರದ ಮೇಲೆ ಪರಿಣಾಮ ಬೀರಬಹುದು ಮತ್ತು ಎಂಪಿವಿ ಫಲಿತಾಂಶಗಳನ್ನು ಬದಲಾಯಿಸಬಹುದು.

5. ಜನ್ಮಜಾತ ಅಂಶಗಳು: ವೈಯಕ್ತಿಕ ಜನ್ಮಜಾತ ಅಂಶಗಳು ಎಂಪಿವಿ ಮೌಲ್ಯಗಳಲ್ಲಿ ಬದಲಾವಣೆಗೆ ಕಾರಣವಾಗಬಹುದು.

6. ಸೋಂಕುಗಳು ಮತ್ತು ಉರಿಯೂತ: ತೀವ್ರವಾದ ಸೋಂಕುಗಳು ಮತ್ತು ಉರಿಯೂತದ ಸ್ಥಿತಿಗಳು ಪ್ಲೇಟ್‌ಲೆಟ್ ಗಾತ್ರವನ್ನು ಬದಲಾಯಿಸಬಹುದು ಮತ್ತು ಎಂಪಿವಿ ರೀಡಿಂಗ್ಸ್ ಮೇಲೆ ಪರಿಣಾಮ ಬೀರಬಹುದು.

7. ಮೂಳೆಮಜ್ಜೆಯ ಕಾಯಿಲೆಗಳು: ಅಪ್ಲಾಸ್ಟಿಕ್ ಅನೀಮಿಯಾದಂತಹ ಮೂಳೆಮಜ್ಜೆಯ ಮೇಲೆ ಪರಿಣಾಮ ಬೀರುವ ಕಾಯಿಲೆಗಳು ಅಸಹಜ ಎಂಪಿವಿ ಮಟ್ಟಗಳಿಗೆ ಕಾರಣವಾಗಬಹುದು.

8. ಧೂಮಪಾನ: ಧೂಮಪಾನವು ಎಂಪಿವಿ ಬದಲಾವಣೆಗಳಿಗೆ ಸಂಬಂಧಿಸಿದ್ದು, ಇದು ಪ್ಲೇಟ್‌ಲೆಟ್ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರಬಹುದು.

9. ಎತ್ತರ: ಎತ್ತರದ ಪ್ರದೇಶಗಳಲ್ಲಿ ವಾಸಿಸುವುದು ಎಂಪಿವಿ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು.

ಎಂಪಿವಿ ಹೈ ಇರುವುದರ ಕಾರಣಗಳನ್ನು ವಿಶ್ಲೇಷಿಸುವಾಗ ಈ ಅಂಶಗಳನ್ನು ಪರಿಗಣಿಸುವುದು ಮುಖ್ಯ, ಮತ್ತು ವೈದ್ಯರು ರೋಗಿಯ ಆರೋಗ್ಯದ ಸಮಗ್ರ ತಿಳುವಳಿಕೆಗಾಗಿ ಇತರ ಬ್ಲಡ್ ಪ್ಯಾರಾಮೀಟರ್ ಗಳ ಜೊತೆಗೆ ಇವುಗಳನ್ನು ಮೌಲ್ಯಮಾಪನ ಮಾಡುತ್ತಾರೆ.

ಒತ್ತಡವು ಎಂಪಿವಿ ಹೆಚ್ಚಳಕ್ಕೆ ಕಾರಣವಾಗಬಹುದೇ?

ಹೌದು, ಒತ್ತಡ ಇದ್ದರೆ ಮೀನ್ ಪ್ಲೇಟ್‌ಲೆಟ್ ವಾಲ್ಯೂಮ್ (ಎಂಪಿವಿ) ಹೆಚ್ಚಾಗಬಹುದಾಗಿದೆ. ಭಾವನಾತ್ಮಕ ಒತ್ತಡ, ಆತಂಕ ಮತ್ತು ಹೆಚ್ಚಿನ ಎಂಪಿವಿ ಮಟ್ಟಗಳ ನಡುವಿನ ಸಂಬಂಧವನ್ನು ಅಧ್ಯಯನಗಳು ಈಗಾಗಲೇ ಸೂಚಿಸಿವೆ. ಪ್ಯಾನಿಕ್ ಡಿಸಾರ್ಡರ್ ಮತ್ತು ಜನರಲೈಸ್ಡ್ ಆಂಕ್ಸೈಟಿ ಡಿಸಾರ್ಡರ್‌ ನಂತಹ ಸ್ಥಿತಿಗಳಿಂದ ಎಂಪಿವಿ ಏರಿಕೆ ಆಗಬಹುದಾಗಿದೆ.

ಹೆಚ್ಚಾಗಿ, ಒತ್ತಡ ಅಥವಾ ಆತಂಕವನ್ನು ಅನುಭವಿಸುವ ರೋಗಿಗಳಲ್ಲಿನ ಹೆಚ್ಚಿನ ಸಿಂಪತೆಟಿಕ್ ಚಟುವಟಿಕೆಗಳು ಎಂಪಿವಿ ಹೆಚ್ಚಲು ಕಾರಣವಾಗಬಹುದು. ಭಾವನಾತ್ಮಕ ಒತ್ತಡ, ಖಿನ್ನತೆ ಮತ್ತು ಆತಂಕದ ಲಕ್ಷಣಗಳು ಎಂಪಿವಿ ಬದಲಾವಣೆಗಳಿಗೆ ಸಂಬಂಧಿಸಿದ್ದು, ಇದು ಮಾನಸಿಕ ಒತ್ತಡ ಮತ್ತು ಪ್ಲೇಟ್‌ಲೆಟ್ ಚಟುವಟಿಕೆಯ ನಡುವಿನ ಭಾರಿ ಸಂಬಂಧವನ್ನು ಸೂಚಿಸುತ್ತದೆ.

ಆದಾಗ್ಯೂ, ಒತ್ತಡವು ಕೇವಲ ಒಂದು ಅಂಶವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ ಮತ್ತು ಎಂಪಿವಿ ಮಟ್ಟಗಳನ್ನು ಇತರ ಕ್ಲಿನಿಕಲ್ ಮಾಹಿತಿಯ ಜೊತೆಗೆ ವಿಶ್ಲೇಷಿಸಬೇಕು.

ಕೊನೆಯ ಮಾತು

ಕೊನೆಯಲ್ಲಿ, ಎಂಪಿವಿ (ಮೀನ್ ಪ್ಲೇಟ್‌ಲೆಟ್ ವಾಲ್ಯೂಮ್) ರಕ್ತ ಪರೀಕ್ಷೆಗಳ ಮೂಲಕ ಪ್ಲೇಟ್‌ಲೆಟ್ ಆರೋಗ್ಯವನ್ನು ಮೌಲ್ಯಮಾಪನ ಮಾಡುವುದು ಬಹಳ ಮುಖ್ಯ. ಮೆಟ್ರೊಪೊಲಿಸ್ ಲ್ಯಾಬ್ಸ್, ತನ್ನ ನಿಖರವಾದ ರೋಗನಿರ್ಣಯಕ್ಕೆ ಹೆಸರುವಾಸಿಯಾಗಿದ್ದು, ಈ ವಿಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂಪಿವಿಯು ಪ್ಲೇಟ್‌ಲೆಟ್ ಗಾತ್ರವನ್ನು ಅಳೆಯುತ್ತದೆ, ಇದು ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಒಳನೋಟವನ್ನು ನೀಡುತ್ತದೆ.

ಮೆಟ್ರೊಪೊಲಿಸ್ ಹೆಲ್ತ್‌ ಕೇರ್, ತನ್ನ ವಿಶಾಲವಾದ ಜಾಲ ಮತ್ತು ಅರ್ಹ ತಂತ್ರಜ್ಞರೊಂದಿಗೆ, ಮನೆಯಲ್ಲಿಯೇ ರಕ್ತ ಸಂಗ್ರಹಕ್ಕೆ ಸೌಕರ್ಯವನ್ನು ಒದಗಿಸುತ್ತದೆ. ಸುಧಾರಿತ ರೋಗನಿರ್ಣಯ ಪ್ರಯೋಗಾಲಯಗಳು ಮಾದರಿಗಳನ್ನು ದಕ್ಷತೆಯಿಂದ ಸಂಸ್ಕರಿಸುತ್ತವೆ ಮತ್ತು ಫಲಿತಾಂಶಗಳು ಇಮೇಲ್ ಅಥವಾ ಮೆಟ್ರೊಪೊಲಿಸ್ ಟ್ರೂಹೆಲ್ತ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುತ್ತವೆ.

Leave a reply

Your email address will not be published. Required fields are marked *

We value your feedback. Share your thoughts, questions, or suggestions and our team will review them shortly.

  • Stay respectful and constructive.
  • Avoid posting personal or sensitive information.
  • Keep your message clear and concise.

Thank you for being a part of our community and helping us improve.

TruHealth Packages

Choose from our wide range of TruHealth Packages and Health Checkups

Proceed

To book your home visit call us at 080-4891-1400

Book a Home Visit Now!

080-4891-1400